ಅಖಿಲ ಕರ್ನಾಟಕ ಪೆಟ್ರೋಲಿಯಂ ಮಾರಾಟಗಾರರ ಒಕ್ಕೂಟ, ಸರ್ಕಾರದ ಗಮನ ಸೆಳೆಯುವ ಸಲುವಾಗಿ ಮಂಗಳವಾರ ಡಿಪೋ ಗಳಿಂದ ತೈಲ ಖರೀದಿ ಮಾಡುವುದಿಲ್ಲ. ಆದರೆ, ರಾಜ್ಯದ ಪೆಟ್ರೋಲ್ ಬಂಕ್ಗಳ ಕಾರ್ಯಚಟುವಟಿಕೆ ನಡೆಯಲಿದೆ. ಸರಕಾರ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದೆ ತೀವ್ರ ಹೋರಾಟ ನಡೆಸಲಿದ್ದೇವೆಂದು ಹೇಳಿದ್ದಾರೆ.
ದೇಶದ 24 ರಾಜ್ಯಗಳು ಒಎಂಸಿಯಿಂದ ಪೆಟ್ರೋಲ್ ಹಾಗೂ ಡೀಸೆಲ್ ಖರೀದಿ ಮಾಡುವು ದಿಲ್ಲ ಎಂದು ದೆಹಲಿ ಪೆಟ್ರೋಲ್ ಡೀಲರ್ಸ್ ಅಸೋಸಿಯೇಷನ್ ಅಧ್ಯಕ್ಷ ಹೇಳಿದ್ದಾರೆ.
ಸರ್ಕಾರ ತೈಲ ಬೆಲೆ ಏರಿಕೆ, ಇಳಿಕೆ ಮಾಡುತ್ತಲೇ ಇರುತ್ತದೆ. ಈ ಬೆಲೆ ಸಮರದಿಂದ ಮಾರಾಟಗಾರರಿಗೆ ಏಕಾಏಕಿ ನಷ್ಟ ಉಂಟಾಗ ಲಿದೆ. ಆದರೆ, 2017ರಿಂದ ಪೆಟ್ರೋಲ್, ಡೀಸೆಲ್ ಮಾರಾಟದಲ್ಲಿ ಶೇ. 1ರಷ್ಟು ಕಮಿಷನ್ ಹೆಚ್ಚಳಕ್ಕೆ ಹಲವು ಬಾರಿ ಮನವಿ ಮಾಡಿ ದರೂ ಕ್ರಮ ಕೈಗೊಂಡಿಲ್ಲ.
ಭಾರತದಲ್ಲಿ ಪ್ರಸ್ತುತ ಡೀಲರ್ ಮಾರ್ಜಿನ್ ಶೇ.2ರಷ್ಟಿದ್ದು, ಅದನ್ನು ಶೇ.5ಕ್ಕೆ ಹೆಚ್ಚಿಸಲು ತೈಲ ಕಂಪನಿ ಗಳನ್ನು ಒತ್ತಾಯಿಸಿವೆ. ಇದರ ಜೊತೆಗೆ ಯುಎಸ್ನಲ್ಲಿನ ಪಂಪ್ಗಳನ್ನು ಉದಾಹರಣೆ ಆಗಿ ಉಲ್ಲೇಖಿಸಿ ಅಲ್ಲಿಯ ಮಾರ್ಜಿನ್ ಶೇ.8ರಷ್ಟಿದೆ ಎಂದು ಅಸೋ ಸಿಯೇಷನ್ ಹೇಳಿದೆ.
ದೆಹಲಿ, ಪಂಜಾಬ್, ಹರಿಯಾಣ, ಗುಜರಾತ್, ರಾಜಸ್ಥಾನ, ಮಹಾರಾಷ್ಟ್ರ, ತಮಿಳುನಾಡು, ಕರ್ನಾಟಕ, ಹಿಮಾಚಲ ಪ್ರದೇಶ, ಬಿಹಾರ, ತೆಲಂಗಾಣ, ಆಂಧ್ರಪ್ರದೇಶ, ಕೇರಳ, ಅಸ್ಸಾಂ, ಮೇಘಾಲಯ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರಾ, ಸಿಕ್ಕಿಂ ಮತ್ತು ಪಶ್ಚಿಮ ಬಂಗಾಳದ ಪೆಟ್ರೋಲ್ ಡೀಲರ್ಗಳು ಮುಷ್ಕರಕ್ಕೆ ಕೈಜೋಡಿಸಿದ್ದಾರೆ