Friday, 22nd November 2024

ರದ್ದುಗೊಂಡ ಕೃಷಿ ಮಸೂದೆ ಚರ್ಚೆಗೆ ಒತ್ತಾಯಿಸಿ ಪ್ರತಿಪಕ್ಷ ಪ್ರತಿಭಟನೆ

ನವದೆಹಲಿ: ಕೃಷಿ ಕಾನೂನುಗಳ ರದ್ದತಿ ಮಸೂದೆಯ ಮೇಲೆ ಚರ್ಚೆಗೆ ಒತ್ತಾಯಿಸಿ ಪ್ರತಿಪಕ್ಷ ನಾಯಕರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಲೋಕಸಭೆ ಕಲಾಪವನ್ನು ಮಧ್ಯಾಹ್ನದವರೆಗೆ ಮುಂದೂಡಲಾಯಿತು.

ಮೂಲಗಳ ಪ್ರಕಾರ, ಸಂಸತ್ತಿನಲ್ಲಿ ಕೃಷಿ ಕಾನೂನುಗಳ ರದ್ದತಿ ಮಸೂದೆಯ ಬಗ್ಗೆ ಯಾವುದೇ ಚರ್ಚೆಗೆ ಸರ್ಕಾರ ಸಿದ್ಧವಿಲ್ಲ. ಪ್ರಧಾನಿ ಕ್ಷಮೆ ಕೇಳಿದ್ದಾರೆ. ನಿಮಗೆ ಇನ್ನೇನು ಬೇಕು? ಎಂದು ಸರಕಾರದ ಪ್ರತಿನಿಧಿಗಳು ಪ್ರತಿಪಕ್ಷ ನಾಯಕರನ್ನು ಕೇಳಿದ್ದಾರೆ.

ರೈತರ ಪ್ರತಿಭಟನೆಯ ಮೃತಪಟ್ಟ ರೈತರ ಕುಟುಂಬಗಳಿಗೆ ಪರಿಹಾರ ಹಾಗೂ ಹಾಗೂ ಎಂಎಸ್ಪಿ ಸಮಸ್ಯೆಗಳನ್ನು ಬಗೆಹರಿಸುವಂತೆ ಪ್ರತಿಪಕ್ಷಗಳು ಒತ್ತಾಯಿಸಿವೆ.

ಕಾಂಗ್ರೆಸ್ ಹಾಗೂ ಟಿಎಂಸಿ ಸಂಸದರು ರೈತರ ಪರ ಘೋಷಣೆಗಳನ್ನು ಕೂಗುತ್ತಿದ್ದಾಗ ವಿವಾದಿತ ಕೃಷಿ ಕಾನೂನಿನ ವಿರುದ್ಧದ ಆಂದೋಲನದ ವೇಳೆ ಪ್ರಾಣ ಕಳೆದುಕೊಂಡ ರೈತರ ಸಾವಿಗೆ ಸದನದಲ್ಲಿ ಸಂತಾಪ ಸೂಚಿಸುವ ನಿರ್ಣಯವನ್ನು ಸದನ ಅಂಗೀಕರಿಸ ಬೇಕೆಂದು ಡಿಎಂಕೆಯ ಟಿ.ಆರ್. ಬಾಲು ಒತ್ತಾಯಿಸಿದರು.

ಹಾಲಿ ಸಂಸದ ಆಸ್ಕರ್ ಫರ್ನಾಂಡಿಸ್ ನಿಧನಕ್ಕೆ ಸಂತಾಪ ಸೂಚಿಸಿ ರಾಜ್ಯಸಭೆ ಕಲಾಪವನ್ನು 1 ಗಂಟೆ ಮುಂದೂಡಲಾಗಿದೆ.