ಹೆಚ್ಚಿನ ಜನರು ಫಿಟ್ ಆಗಿರಲು, ಕೊಬ್ಬು ಕಡಿಮೆ ಮಾಡಿಕೊಳ್ಳಲು ಪ್ರೋಟೀನ್ ಪೌಡರ್ ಅನ್ನು ಬಳಸುತ್ತಾರೆ. ಆದರೆ ನೀವು ಸರಿಯಾದ ಪ್ರೋಟೀನ್ ಪುಡಿಯನ್ನು ಆರಿಸಿದರೆ , ಇದು ನಿಮ್ಮ ಫಿಟ್‍ನೆಸ್‍ಗೆ ಸಹಾಯ ಮಾಡುತ್ತದೆ. ಇಲ್ಲವಾದರೆ ಇದು ಅನೇಕ ಅಡ್ಡಪರಿಣಾಮಗಳನ್ನು ಮಾಡುವ ಸಾಧ್ಯತೆ ಇರುತ್ತದೆ.ಮಾರುಕಟ್ಟೆಯಲ್ಲಿ ಸಾಕಷ್ಟು ಬ್ರ್ಯಾಂಡ್‌ನ ಪ್ರೋಟಿನ್ ಪೌಡರ್‌ಗಳು ಇರುತ್ತವೆ. ಇದನ್ನು ಖರೀದಿಸುವ ಮೊದಲು ಪರಿಗಣಿಸಬೇಕಾದ ಕೆಲವು ಅಂಶಗಳು ಇಲ್ಲಿವೆ-
ಎಲ್ಲರಿಗೂ ಪ್ರೋಟೀನ್ ಪೌಡರ್ ಅಗತ್ಯವಿಲ್ಲ
ಹೌದು, ಆರೋಗ್ಯಕರ ಆಹಾರವನ್ನು ಸೇವಿಸುವವರಿಗೆ ಪ್ರೋಟೀನ್ ಪುಡಿಯ ಅಗತ್ಯವಿಲ್ಲ. ಅಂತವರು ಹೆಚ್ಚಾಗಿ ತಮ್ಮ ಊಟದಲ್ಲಿ ಸಾಕಷ್ಟು ಪ್ರೋಟೀನ್‍ಗಳನ್ನು ಪಡೆಯುತ್ತಾರೆ. ನೀವು ಮಾಂಸ, ಮೀನು, ಮೊಟ್ಟೆ ಮತ್ತು ಡೈರಿ ಉತ್ಪನ್ನಗಳನ್ನು ಒಳಗೊಂಡಿರುವ ಸಮತೋಲಿತ ಊಟವನ್ನು ನಿಯಮಿತವಾಗಿ ಸೇವಿಸುವವರಾಗಿದ್ದರೆ, ಪೂರಕಗಳನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ.
ಸರಿಯಾದ ಬ್ರಾಂಡ್ ಆರಿಸಿ
ಮಾರುಕಟ್ಟೆಯಲ್ಲಿ ಹಲವಾರು ಬಗೆಯ ಪ್ರೋಟೀನ್ ಪೌಡರ್ ದೊರೆಯುತ್ತದೆ. ಇದರ ನಡುವೆ ಉತ್ತಮ ಬ್ರಾಂಡ್ ಅನ್ನು ಕಂಡುಹಿಡಿಯುವುದು ಹೆಚ್ಚು ಕಷ್ಟಕರವಾಗಿದೆ. ನೀವು ಜಾಗರೂಕರಾಗಿ ಪೌಡರ್ ನ್ನು ಆಯ್ಕೆ ಮಾಡಬೇಕು. ನೀವು ಖರೀದಿಸುವ ಮುನ್ನ ಅದರ ಲೇಬಲ್‍ಗಳನ್ನು ಓದುವುದು ಉತ್ತಮ.
ವೈದ್ಯರ ಸಲಹೆ ತೆಗೆದುಕೊಳ್ಳಿ
ಫಿಟ್‌ನೆಸ್ ನಿಯಮವನ್ನು ಅಳವಡಿಸಿಕೊಳ್ಳುವಾಗ ಯಾವಾಗಲೂ ವೈದ್ಯರು ಅಥವಾ ಆರೋಗ್ಯ ತಜ್ಞರನ್ನು ಸಂಪರ್ಕಿಸಿ ಸಲಹೆ ಪಡೆಯುವುದು ಒಳ್ಳೆಯದು. ಉತ್ತಮ ಫಲಿತಾಂಶಗಳಿಗಾಗಿ ಪ್ರೋಟೀನ್ ಪುಡಿಯನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸಲು ಅವರು ಸಲಹೆ ನೀಡುತ್ತಾರೆ. ಹಾಗೇ ನೀವು ಯಾವುದೇ ಸಮಸ್ಯೆಗಳನ್ನು ಎದುರಿಸಿದರೆ ತಕ್ಷಣ ವೈದ್ಯರನ್ನು ಭೇಟಿ ಮಾಡಬಹುದು.
ಪ್ರೋಟೀನ್ ಪುಡಿ ಎಷ್ಟು ಚೆನ್ನಾಗಿ ಬೆರೆಯುತ್ತದೆ ಎಂದು ಪರಿಶೀಲಿಸಿ
ಪ್ರೋಟೀನ್ ಪುಡಿಯನ್ನು ಹಾಲಿನೊಂದಿಗೆ ಬೆರೆಸುವಾಗ ಸರಿಯಾಗಿ ಗಮನಿಸಿ. ಅದರಲ್ಲಿ ಗುಳ್ಳೆಗಳು ರೂಪುಗೊಳ್ಳುವುದನ್ನು ನೀವು ನೋಡಿದರೆ ಅದನ್ನು ಬದಲಾಯಿಸುವುದು ಉತ್ತಮ. ಉತ್ತಮ ಗುಣಮಟ್ಟದ ಪ್ರೋಟೀನ್ ಪುಡಿಗಳ ಪ್ರಮುಖ ಲಕ್ಷಣವೆಂದರೆ ಅವು ಸುಲಭವಾಗಿ ಕರಗುತ್ತವೆ.
ಪ್ರೋಟೀನ್ ಪುಡಿ ರುಚಿಯಾಗಿದೆಯೇ ಎಂದು ಪರಿಶೀಲಿಸಿ
ಹೊಸ ಪ್ರೋಟೀನ್ ಪುಡಿಯನ್ನು ಹುಡುಕುವಾಗ ರುಚಿ ಕೂಡ ನೀವು ಪರಿಗಣಿಸಬೇಕಾದ ಪ್ರಮುಖ ಅಂಶವಾಗಿದೆ. ಪ್ರೋಟೀನ್ ಪೌಡರ್ ವಿವಿಧ ರುಚಿಗಳಲ್ಲಿ ಲಭ್ಯವಿದೆ. ನಿಮಗೆ ಹೆಚ್ಚು ಸೂಕ್ತವಾದದನ್ನು ನೀವು ಆಯ್ಕೆ ಮಾಡಬಹುದು.
ಇದನ್ನೂ ಓದಿ:ಚಳಿಗಾಲದಲ್ಲಿ ತಲೆಹೊಟ್ಟು ತಡೆಗಟ್ಟಲು ಈ ಹೇರ್ ಮಾಸ್ಕ್ ಬಳಸಿ
ಈ ರೀತಿಯಲ್ಲಿ ಆರೋಗ್ಯಕರವಾದ ಪ್ರೋಟೀನ್ ಪೌಡರ್ ಅನ್ನು ಆರಿಸಿಕೊಂಡು ಬಳಸುವುದರಿಂದ ನೀವು ಉತ್ತಮವಾದ ಫಿಟ್‍ನೆಸ್ ಅನ್ನು ಕಾಯ್ದುಕೊಳ್ಳಬಹುದು. ಮತ್ತು ಆರೋಗ್ಯವಾಗಿರಬಹುದು.