Saturday, 23rd November 2024

ತಮ್ಮ ಸರ್ಕಾರಿ ನಿವಾಸಕ್ಕೆ ಒಲೆ ನೀಡುವಂತೆ ಕೇಳಿಕೊಂಡ ಕೈ ಮುಖಂಡ !

ಲಖನೌ: ಎಲ್​​ಪಿಜಿ ಸಿಲಿಂಡರ್​ ಬೆಲೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಕಾಂಗ್ರೆಸ್​ ಎಂಎಲ್​​ಸಿ ತಮ್ಮ ಸರ್ಕಾರಿ ನಿವಾಸಕ್ಕೆ ಒಲೆಯನ್ನು ನೀಡುವಂತೆ ಕೇಳಿಕೊಂಡಿದ್ದಾರೆ.

ಎಂಎಲ್​ಸಿ ದೀಪಕ್​ ಸಿಂಗ್​​ ತಮಗೆ ಮನೆ ಮಂಜೂರು ಮಾಡಿರುವ ಉಸ್ತುವಾರಿ ಅಧಿಕಾರಿಗೆ ಬೇಡಿಕೆ ಪತ್ರವನ್ನು ರವಾನಿಸಿದ್ದಾರೆ. 2024ರವರೆಗೆ ಎಲ್​ಪಿಜಿ ಸಿಲಿಂಡರ್​ ದರ ಕಡಿಮೆಯಾಗುವ ಮಾತೇ ಇಲ್ಲ ಎಂದು ಹೇಳಿದ್ದಾರೆ.

ಅಪಾರ್ಟ್​ಮೆಂಟ್​​ನಲ್ಲಿ ಒಲೆಯ ಸೌಕರ್ಯ ಇದೆಯೇ ಎಂದು ಖಚಿತಪಡಿಸಿಕೊಳ್ಳಿ. ಏಕೆಂದರೆ ಪ್ರಸ್ತುತ ಸಿಲಿಂಡರ್​ ದರವನ್ನು ನೋಡಿದರೆ ಕಟ್ಟಿಗೆ ಹಾಗೂ ಕಲ್ಲಿದ್ದಲು ವ್ಯವಸ್ಥೆ ಮಾಡಿಕೊಳ್ಳುವುದೇ ಅಗ್ಗ ಎನಿಸಲಿದೆ. 975 ರೂಪಾಯಿ ಮೌಲ್ಯದ ಸಿಲಿಂಡರ್​​ನ್ನು ತಿಂಗಳಲ್ಲಿ 2 ಬಾರಿ ರೀಫಿಲ್​ ಮಾಡಿಕೊಳ್ಳಬೇಕು. ಆದರೆ ಕಟ್ಟಿಗೆ ಒಲೆಯಲ್ಲಿ ಅಡುಗೆ ಮಾಡಿದಲ್ಲಿ ತಿಂಗಳಿಗೆ 500 ರೂಪಾಯಿ ಖರ್ಚು ಆಗಲಿದೆ ಎಂದು ಹೇಳಿದ್ದಾರೆ.

2024ಕ್ಕಿಂತಲೂ ಮೊದಲು ಸಿಲಿಂಡರ್​ ದರ ಇಳಿಕೆ ಕಾಣುವುದು ಕನಸಿನ ಮಾತಾಗಿರುವುದರಿಂದ ನಾನಿರುವ ಅಪಾರ್ಟ್​ಮೆಂಟ್​​ನಲ್ಲಿ ವಾಸಿಸುತ್ತಿರುವ ಬಹುತೇಕ ಶಾಸಕರು ಒಲೆ ವ್ಯವಸ್ಥೆಯನ್ನೇ ಬಯಸುತ್ತಿದ್ದಾರೆ ಎಂದು ದೀಪಕ್​ ಸಿಂಗ್​ ಹೇಳಿದ್ದಾರೆ