ಪಿಟಿಸಿ ಇಂಡಿಯಾ ಫೈನಾನ್ಷಿಯಲ್ ಕಂಪೆನಿಯ ಮೂವರು ಸ್ವತಂತ್ರ ನಿರ್ದೇಶಕರು ಕಾರ್ಪೊರೇಟ್ ಆಡಳಿತದಲ್ಲಿನ ವ್ಯತ್ಯಯದ ಕಾರಣಕ್ಕೆ ತಮ್ಮ ಹುದ್ದೆಯನ್ನು ತ್ಯಜಿಸಿದ ನಂತರದ ಒಂದು ದಿನಕ್ಕೆ ಷೇರುಗಳು ಭಾರೀ ಕುಸಿತ ಕಂಡವು.
ಗುರುವಾರ ಆರಂಭದ ವಹಿವಾಟಿನಲ್ಲಿ ಶೇ.20ರ ತನಕ ಬೆಲೆ ನೆಲ ಕಚ್ಚಿತು. ಮಾತೃಸಂಸ್ಥೆ ಪಿಟಿಸಿ ಇಂಡಿಯಾ ಷೇರು ಶೇ.6ರಷ್ಟು ಇಳಿಯಿತು.
ಸ್ವತಂತ್ರ ನಿರ್ದೇಶಕರಾದ ಕಮಲೇಶ್ ವಿಕಮ್ಸೆ, ಥಾಮಸ್ ಮಾಥ್ಯೂ, ಸಂತೋಷ್ ನಾಯರ್ ಬುಧವಾರ ರಾಜೀನಾಮೆ ನೀಡಿದ್ದಾರೆ. ಇದಕ್ಕಿಂತ ಹೆಚ್ಚಾಗಿ ರತ್ನೇಶ್ ಅವರನ್ನು ಫೈನಾನ್ಸ್ ನಿರ್ದೇಶಕ ಮತ್ತು ಸಿಎಫ್ಒ ಆಗಿ ನೇಮಕ ಮಾಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆಡಳಿತ ಮಂಡಳಿ ಪ್ರೊಸೆಸ್ ಮೂಲಕ ರತ್ನೇಶ್ ಆಯ್ಕೆಯಾದ ನಂತರವೂ ಅಧ್ಯಕ್ಷರು ಮತ್ತು ಕಾರ್ಯನಿರ್ವಾಹಕ ನಿರ್ದೇಶಕರು ಮಾಹಿತಿ ನೀಡಿರಲಿಲ್ಲ ಎಂದು ಆರೋಪಿಸಿದ್ದಾರೆ.
ಪಿಟಿಸಿ ಇಂಡಿಯಾ ಫೈನಾನ್ಷಿಯಲ್ ಸರ್ವೀಸಸ್ ನಾನ್ ಬ್ಯಾಂಕಿಂಗ್ ಫೈನಾನ್ಷಿಯಲ್ ಇನ್ಸ್ಟಿಟ್ಯೂಷನ್ ಎಂದು ನೋಂದಣಿ ಆಗಿದೆ. ಇದರ ವ್ಯವಹಾರದಲ್ಲಿ ಈಕ್ವಿಟಿ ಮತ್ತು ಸಾಲಪತ್ರಗಳಿಗೆ ಹಣಕಾಸು ಸೌಲಭ್ಯ ಒದಗಿಸುವುದು ಒಳಗೊಂಡಿದೆ.