Saturday, 12th October 2024

ಸಚಿವರ ಸಲಹೆಗೆ ಸಾರ್ವಜನಿಕ ಆಕ್ರೋಶ…ಏನದು ?

ಗೋವಾ: ಒಂದು ವೇಳೆ ಪೆಟ್ರೋಲ್, ಡೀಸೆಲ್ ಖರೀದಿಸಲು ಸಾಧ್ಯವಾಗದಿದ್ದರೆ ಎಲೆಕ್ಟ್ರಿಕಲ್ ವಾಹನಗಳನ್ನು ಕೊಂಡುಕೊಳ್ಳಿ ಎಂದು ಸಚಿವ ನೀಲೇಶ್ ಕಬ್ರಾಲ್ ಸಲಹೆ ಅಸಮಾಧಾನಕ್ಕೆ ಕಾರಣವಾಗಿದೆ. ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗುತ್ತಲೆ ಇದೆ.

ಗ್ಯಾಸ್ ಸಿಲಿಂಡರ್, ಅಡುಗೆ ಎಣ್ಣೆ ಸೇರಿದಂತೆ ದೈನಂದಿನ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು, ಈ ನಡುವೆ ಗೋವಾ ಸಚಿವರ ಈ ಸಲಹೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಲೆ ಏರಿಕೆ ಕುರಿತು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಎಲೆಕ್ಟ್ರಿಕ್ ವಾಹನಗಳನ್ನು ಖರೀದಿ ಮಾಡಲು ಸರ್ಕಾರ ರಿಯಾಯ್ತಿ ನೀಡುತ್ತದೆ. ಅಲ್ಲದೆ ಇವುಗಳ ಬಳಕೆಯಿಂದ ಪರಿಸರದ ಮೇಲೆ ಹಾನಿಯೂ ಕಡಿಮೆಯಾಗುತ್ತದೆ. ವಿದ್ಯುನ್ಮಾನ ವಾಹನಗಳನ್ನು ಬಳಸಿ ಎಂದು ಸಾರ್ವಜನಿಕ ವ್ಯವಹಾರಗಳ ಸಚಿವ ನೀಲೇಶ್ ಕಬ್ರಾಲ್ ಸಲಹೆ ಮಾಡಿದ್ದಾರೆ.