ಮಹಾರಾಷ್ಟ್ರದ ಪುಣೆ ನಗರದಲ್ಲಿ ವ್ಯಾಪಾರಿಗಳ ಸಂಘಟನೆಯು ‘ಬಂದ್’ಗೆ ಬೆಂಬಲ ನೀಡಲು ನಿರ್ಧರಿಸಿದೆ. ಕಾಂಗ್ರೆಸ್, ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್ಸಿಪಿ), ಶಿವಸೇನೆ, ಸಂಭಾಜಿ ಬ್ರಿಗೇಡ್ ಮತ್ತು ಇತರ ಕೆಲವು ಸಂಘಟನೆಗಳು ಬಂದ್ಗೆ ಕರೆ ನೀಡಿವೆ.
ರಾಜ್ಯಪಾಲರ ಹೇಳಿಕೆ ಖಂಡಿಸಿ ಕರೆ ನೀಡಿರುವ ಬಂದ್ಗೆ ಬೆಂಬಲ ನೀಡುವಂತೆ ಮೂರು ಪಕ್ಷಗಳ ಪದಾಧಿಕಾರಿಗಳು ಮತ್ತು ಸ್ಮಭಾಜಿ ಬ್ರಿಗೇಡ್ನ ಪದಾಧಿಕಾರಿಗಳು ವರ್ತಕರ ಸಂಘಕ್ಕೆ ಮನವಿ ಮಾಡಿದ್ದಾರೆ ಎಂದು ಪುಣೆಯ ವರ್ತಕರ ಸಂಘಗಳ ಒಕ್ಕೂಟದ (ಎಫ್ಎಟಿಪಿ) ಅಧ್ಯಕ್ಷ ಫತೇಚಂದ್ ರಂಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೇಂದ್ರ ಸಚಿವ ಮತ್ತು ಬಿಜೆಪಿ ನಾಯಕ ನಿತಿನ್ ಗಡ್ಕರಿ ಮತ್ತು ಎನ್ಸಿಪಿ ನಾಯಕ ಶರದ್ ಪವಾರ್ ಅವರನ್ನು ಸನ್ಮಾನಿಸುವ ಕಾರ್ಯಕ್ರಮದಲ್ಲಿ ರಾಜ್ಯಪಾಲರು ಈ ಹೇಳಿಕೆ ನೀಡಿದ್ದರು.