ಸಾಂಪ್ರದಾಯಿಕ ಆನಂದ್ ಕರಜ್ ಪ್ರಕಾರ, ಸಿಖ್ ಸಂಪ್ರದಾಯದಂತೆ ಗುರುದ್ವಾರದಲ್ಲಿ ಮದುವೆ ನಡೆಯಿತು. ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಮದುವೆಯಲ್ಲಿ ಪಾಲ್ಗೊಂಡು ನವವಿವಾಹಿತ ದಂಪತಿಗಳಿಗೆ ಆಶೀರ್ವದಿಸಿದರು.
ಎಎಪಿ ಸಂಸದ ರಾಘವ್ ಚಡ್ಡಾ ಕೂಡ ಉತ್ಸವದಲ್ಲಿ ಭಾಗಿಯಾಗಿದ್ದು, ‘ನಾನು ನನ್ನ ತಾಯಿಯೊಂದಿಗೆ ಇಲ್ಲಿಗೆ ಬಂದಿದ್ದೇನೆ… ಈ ವಿಶೇಷ ಸಂದರ್ಭದಲ್ಲಿ ನಾನು ಮನ್ ಸಾಹೇಬ್ ಮತ್ತು ಅವರ ಕುಟುಂಬ ವನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ’ ಎಂದು ಹೇಳಿದರು.
ಗುರ್ಪ್ರೀತ್ ಕೌರ್ (30) ತನ್ನ ಚಿತ್ರವನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದು, ‘ದಿನ್ ಶಗ್ನಾ ದ ಚಾಡಿಯಾ’ (ಮದುವೆಯ ದಿನ ಬಂದಿದೆ) ಎಂದು ಬರೆದಿದ್ದಾರೆ. ಅವರು ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕರಿಗೆ ತಮ್ಮ ಅಭಿನಂದನಾ ಸಂದೇಶಗಳಿಗಾಗಿ ಧನ್ಯವಾದ ಅರ್ಪಿಸಿದರು.
ಭಗವಂತ್ ಮಾನ್ ಮತ್ತು ಡಾ.ಗುರುಪ್ರೀತ್ ಕೌರ್ ಅವರ ಕುಟುಂಬಗಳು ಜು.6 ರ ಬುಧವಾರದವರೆಗೆ ತಮ್ಮ ಮುಂಬರುವ ಮದುವೆಯ ಸುದ್ದಿಯನ್ನು ಬಹಿರಂಗಪಡಿಸಲಿಲ್ಲ.
ಇದು ಮಾನ್ ಅವರ ಎರಡನೇ ವಿವಾಹವಾಗಿದೆ. ಅವರು 2015 ರಲ್ಲಿ ತಮ್ಮ ಮೊದಲ ಪತ್ನಿಯಿಂದ ವಿಚ್ಚೇದನ ಪಡೆದಿದ್ದಾರೆ. ಮೊದಲ ವಿವಾಹದಿಂದ ಮಗಳು ಸೀರತ್ ಕೌರ್ (21) ಮತ್ತು ಮಗ ದಿಲ್ಶಾನ್ (17) ಎಂಬ ಮಕ್ಕಳನ್ನು ಹೊಂದಿದ್ದಾರೆ.