ಚಂಡೀಗಢ: ಅಮರೀಂದರ್ ‘ಪಂಜಾಬ್ ವಿಕಾಸ್ ಪಾರ್ಟಿ’ ಎಂಬ ಹೊಸ ಪಕ್ಷವನ್ನು ಸ್ಥಾಪನೆ ಮಾಡಲಿದ್ದಾರೆ ಎನ್ನಲಾಗಿದೆ. ಕೆಲವೇ ದಿನಗಳಲ್ಲಿ ಆಪ್ತರೊಂದಿಗೆ ಈ ಸಂಬಂಧ ಸಭೆ ನಡೆಸಲಿರುವ ಅಮರೀಂದರ್ ಸಿಂಗ್ ಪಕ್ಷ ಸ್ಥಾಪನೆ ಬಗ್ಗೆ ಅಧಿಕೃತ ಘೋಷಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಪಂಜಾಬ್ ಮಾಜಿ ಮುಖ್ಯಮಂತ್ರಿ ಈಗಾಗಲೇ ತಾವು ಬಿಜೆಪಿ ಸೇರ್ಪಡೆಯಾಗುವುದಿಲ್ಲ ಎಂಬ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ.
ಸ್ವಂತ ಪಕ್ಷ ಸ್ಥಾಪನೆ ಘೋಷಣೆ ಮಾಡುವ ಮುನ್ನ ಪಂಜಾಬ್ನ ರೈತ ನಾಯಕರನ್ನು ಹಾಗೂ ನವಜೋತ್ ಸಿಂಗ್ ಸಿಧು ವಿರೋಧಿ ಬಣದವರನ್ನು ಭೇಟಿ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಅಲ್ಲದೆ ಅಮರೀಂದರ್ ಸಿಂಗ್ ಪಂಜಾಬ್ನ ಮುಂಬರುವ ವಿಧಾನ ಸಭಾ ಚುನಾವಣೆ ಅಂಗವಾಗಿ ಸಣ್ಣ ಪಕ್ಷಗಳ ಜೊತೆ ಸಂಪರ್ಕದಲ್ಲೂ ಇದ್ದಾರೆ ಎಂದು ಮೂಲಗಳು ತಿಳಿಸಿವೆ.
ಕ್ಯಾಪ್ಟನ್ ಅಮರೀಂದರ್ ಸಿಂಗ್ ಕೆಲ ದಿನಗಳ ಹಿಂದಷ್ಟೇ ದೆಹಲಿಯಲ್ಲಿ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ರನ್ನು ಭೇಟಿಯಾಗಿದ್ದರು. ಅಮರೀಂದರ್ ತಮ್ಮನ್ನು ಪಕ್ಷದಲ್ಲಿ ಗೌರವಿಸಿದ ಕಾರಣ ಕಾಂಗ್ರೆಸ್ ತ್ಯಜಿಸುತ್ತಿರೋದಾಗಿ ಹೇಳಿದ್ದರು.