Thursday, 12th December 2024

ಪಂಜಾಬನಲ್ಲಿ ಜಿ-20 ಸಮ್ಮೇಳನ ರದ್ದು…!

ಮೃತಸರ: ಪಂಜಾಬನಲ್ಲಿ ಕಳೆದ ಕೆಲವು ದಿನಗಳಿಂದ ಖಲಿಸ್ತಾನವಾದಿಗಳಿಂದ ನಡೆಸಲಾಗುತ್ತಿರುವ ಹಿಂಸಾಚಾರದ ಹಿನ್ನೆಲೆಯಲ್ಲಿ ಮಾ.15 ರಿಂದ 17 ಮತ್ತು ಮಾ.19 ಮತ್ತು 20 ಈ ಕಾಲಾವಧಿಯಲ್ಲಿ ಆಯೋಜಿಸ ಲಾಗಿರುವ ಜಿ-20 ಸಮ್ಮೇಳನವನ್ನು ರದ್ದುಗೊಳಿಸುವ ಸಾಧ್ಯತೆ ನಿರ್ಮಾಣವಾಗಿದೆ.

ಮೂಲಗಳ ಪ್ರಕಾರ ಈ ಸಮ್ಮೇಳನವನ್ನು ರದ್ದುಗೊಳಿಸಲಾಗಿದೆ.

ಸಮ್ಮೆಳನವನ್ನು ಭದ್ರತಾ ವ್ಯವಸ್ಥೆಯ ಸಲಹೆಯನುಸಾರ ರದ್ದುಗೊಳಿಸಲು ನಿರ್ಣಯ ತೆಗೆದುಕೊಳ್ಳಲಾಗಿದೆ ಯೆಂದು ಹೇಳಲಾಗುತ್ತಿದೆ. ಖಲಿಸ್ತಾನವಾದಿ ಗಳ ಹೆಚ್ಚುತ್ತಿರುವ ಉಪದ್ರವದಿಂದ ಭದ್ರತಾ ವ್ಯವಸ್ಥೆಯು ಸಮ್ಮೇಳನ ರದ್ದುಗೊಳಿಸುವಂತೆ ಸಲಹೆ ನೀಡಿದೆಯೆಂದು ಹೇಳಲಾಗುತ್ತಿದೆ.