Sunday, 15th December 2024

ಪಂಜಾಬ್’ನಲ್ಲಿ ಇಂಟರ್ ನೆಟ್ ನಿಷೇಧ ವಿಸ್ತರಣೆ

ಚಂಡೀಗಢ: ಪಂಜಾಬ್ ಸರ್ಕಾರ ಇಂಟರ್ ನೆಟ್ ನಿಷೇಧವನ್ನು ವಿಸ್ತರಿಸಿದೆ. ಸೋಮವಾರದವರೆಗೂ ಮೊಬೈಲ್ ಇಂಟರ್ ನೆಟ್ ಹಾಗೂ ಎಸ್‌ಎಂಎಸ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.
ಸಿಖ್ ಸಮುದಾಯದ ತೀವ್ರಗಾಮಿ ಹಾಗೂ ಖಲಿಸ್ತಾನ ಬೆಂಬಲಿಗ ಅಮೃತ್ ಪಾಲ್ ಸಿಂಗ್ ಗೆ ಶೋಧ ಕಾರ್ಯಾಚರಣೆ ಮುಂದುವರೆಗಿದೆ.
ಪೊಲೀಸ್ ಅಧಿಕಾರಿಗಳು ಶೋಧಕಾರ್ಯಾಚರಣೆ ಬಗ್ಗೆ ಮಾತನಾಡಿದ್ದು, ಶೀಘ್ರವೇ ಬಂಧಿಸಲಾಗುತ್ತದೆ ಎಂದು ಹೇಳಿದ್ದಾರೆ.
ಬ್ಯಾಂಕಿಂಗ್ ಸೇವೆಗಳಿಗೆ ಆಸ್ಪತ್ರೆ ಸೇವೆಗಳು ಹಾಗೂ ಇನ್ನಿತರ ಬ್ರಾಡ್ ಬ್ಯಾಂಡ್ ಸೇವೆಗಳನ್ನು ನಿರ್ಬಂಧಿಸಲಾಗಿಲ್ಲ ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹೇಳಿದ್ದಾರೆ.