Thursday, 12th December 2024

ಪಂಜಾಬ್‍ನ ತಾಂಡಾದಲ್ಲಿ ಭಾರತ್ ಜೋಡೋ ಯಾತ್ರೆ ಪುನರ್ ಆರಂಭ

ಹೋಶಿಯಾರ್‍ಪು: ಕಾಶ್ಮೀರ ಪ್ರವೇಶಿಸುವ ಎರಡು ದಿನಗಳ ಮುನ್ನಾ ಪಂಜಾಬ್‍ನ ತಾಂಡಾದಲ್ಲಿ ರಾಹುಲ್‍ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಪುನರ್ ಆರಂಭವಾಯಿತು.

ಈ ನಡುವೆ ಯಾತ್ರೆ ಜಮ್ಮು -ಕಾಶ್ಮೀರ ಪ್ರವೇಶಿಸುವ ವೇಳೆ ಕೈಗೊಳ್ಳ ಬೇಕಾದ ಭದ್ರತೆ ಕುರಿತಂತೆ ಪೂರ್ವಸಿದ್ಧತೆ ಕೈಗೊಳ್ಳ ಲಾಗಿದೆ.

ಕಳೆದೆರಡು ದಿನಗಳಿಂದ ಶೀತಾಂಶ ಕುಸಿತವಾಗಿದ್ದು, ಕೊರೆವ ಚಳಿಯಲ್ಲಿ ರಾಹುಲ್‍ಗಾಂಧಿ ಎಂದಿನಂತೆ ಸಾಮಾನ್ಯವಾದ ಬಿಳಿ ಟಿ-ಶಟ್ ಧರಿಸಿಯೇ ಪಾದಯಾತ್ರೆ ಮುಂದುವರೆಸಿದರು. ಪಂಜಾಬ್ ಕಾಂಗ್ರೆಸ್‍ನ ಮುಖ್ಯಸ್ಥ ಅಮರಿಂದರ್ ಸಿಂಗ್ ರಾಜಾ ವಾರಿಂಗ್, ಹರೀಶ್ ಚೌಧರಿ ಮತ್ತು ರಾಜ್ ಕುಮಾರ್ ಚಬ್ಬೇವಾಲ್ ಸೇರಿದಂತೆ ಪಕ್ಷದ ಹಿರಿಯ ನಾಯಕರು ಬೆಚ್ಚನೆಯ ಉಡುಪುಗಳನ್ನು ಧರಿಸಿ ಯಾತ್ರೆಯಲ್ಲಿ ಭಾಗವಹಿಸಿದ್ದರು.

ಜನವರಿ 19ರವರೆಗೂ ಪಂಜಾಬ್‍ನಲ್ಲೇ ಸಂಚರಿಸಿ, ನಂತರ ಕಾಶ್ಮೀರ ಪ್ರವೇಶಿಸಲಿದೆ. ಅಲ್ಲಿ ಆರು ದಿನಗಳ ಕಾಲ ಸಂಚರಿಸಲಿದೆ.