ಪುರಿ: ಜಗನ್ನಾಥ ದೇವಸ್ಥಾನದಲ್ಲಿ ಭಾನುವಾರ ಕಾಲ್ತುಳಿತ ಸಂಭವಿಸಿ 2 ಭಕ್ತರು ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ.
ಸಂಕ್ರಾಂತಿ ಪ್ರಯುಕ್ತ ಇಲ್ಲಿ ನಡೆಯುವ ‘ಮಕರ ಮೇಳ’ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ಈ ವೇಳೆ ಇಬ್ಬರು ಮಹಿಳೆ ಯರು ಗಾಯಗೊಂಡಿದ್ದಾರೆ. ಮಕರ ಸಂಕ್ರಾಂತಿ ಹಬ್ಬದ ಹಿಂದಿನ ರಾತ್ರಿ ಹಲವಾರು ಧಾರ್ಮಿಕ ಪೂಜಾ ಕೈಂಕರ್ಯಗಳು ಜರುಗಿದವು ಆದ ಕಾರಣ ದೇವಸ್ಥಾನದ ಬಾಗಿಲು ತೆರೆಯುವುದು ತಡವಾಗಿದೆ.