Thursday, 12th December 2024

Pushpa 2 : ಥಿಯೇಟರ್‌ಗೆ ನುಗ್ಗಿ 1.34 ಲಕ್ಷ ರೂ. ದೋಚಿದ ಖದೀಮರು- ಪುಷ್ಪ 2 ಸಿನಿಮಾ ಗಳಿಕೆ ಕಳ್ಳರ ಪಾಲು

Pushpa 2

ರಾಯ್‌ಪುರ: ಡಿಸೆಂಬರ್‌ ಮೊದಲ ವಾರದಲ್ಲಿ ಬಿಡುಗಡೆಯಾದ ಪುಷ್ಪ 2 (Pushpa 2) ವಿಶ್ವದಾದ್ಯಂತ ಅಬ್ಬರಿಸುತ್ತಿದೆ. ಛತ್ತೀಸ್‌ಗಢದ (Chhattisgarh) ಭಿಲಾಯ್‌ನಲ್ಲಿರುವ ಚಿತ್ರಮಂದಿರದಲ್ಲಿ ಕಳ್ಳತನದ ಕೇಸ್‌ ಒಂದು ದಾಖಲಾಗಿದೆ. ಪುಷ್ಪ 2 ಚಿತ್ರದ ಪ್ರದರ್ಶನದಲ್ಲಿ ಗಳಿಸಿದ್ದ ಒಟ್ಟು  1.34 ಲಕ್ಷ ರೂ.ಗಳನ್ನು ಖದೀಮರು ದೋಚಿದ್ದಾರೆ.

ಛತ್ತೀಸ್‌ಗಢದ ಮುಕ್ತ ಆರ್ಟ್-2 ಸಿನಿಮಾ ಹಾಲ್‌ನಲ್ಲಿದ್ದ ಹಣವನ್ನು ದೋಚಿದ ಕಳ್ಳರು , ಸಿಸಿಟಿವಿ ಫೂಟೇಜ್‌ನ ಡಿವಿಡಿಯನ್ನೂ ತೆಗೆದುಕೊಂಡು ಹೋಗಿದ್ದಾರೆ. ಬೆಳಗಿನ ಜಾವ 3 ಗಂಟೆಗೆ ಥಿಯೇಟರ್‌ಗೆ ಮೋಟಾರು ಬೈಕ್‌ನಲ್ಲಿ ಬಂದ ಮುಸುಕುಧಾರಿಗಳಿಬ್ಬರು ಚಿತ್ರ ಮಂದಿರದ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ್ದಾರೆ. ನಂತರ ಕೊಠಡಿಯ ಬೀಗ ತೆಗೆದು ಲಾಕರ್‌ನ ಕೀಗಳನ್ನು ತೆಗೆದುಕೊಂಡು1.34 ಲಕ್ಷ ರೂ.ಗಳನ್ನು ಕದ್ದೊಯ್ದಿದ್ದಾರೆ.

ಮರುದಿನ ಬೆಳಗ್ಗೆ ಥಿಯೇಟರ್ ಸಿಬ್ಬಂದಿ ಬಂದು ಮ್ಯಾನೇಜರ್ ಹಾಗೂ ಮಾಲೀಕರಿಗೆ ಮಾಹಿತಿ ನೀಡಿದ್ದಾರೆ. ಘಟನೆಯ ಬಗ್ಗೆ ಮಾತನಾಡಿರುವ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಸುಖ್ ನಂದನ್ ರಾಥೋಡ್ ಟಾಕೀಸ್ ಮ್ಯಾನೇಜರ್ ದೀಪಕ್ ಕುಮಾರ್ ಅವರು ಇಬ್ಬರು ಯುವಕರನ್ನು ತೋರಿಸುವ ಸಿಸಿಟಿವಿ ದೃಶ್ಯಾವಳಿಗಳನ್ನು ಒದಗಿಸಿದ್ದಾರೆ. ನಾವು ಭದ್ರತಾ ಸಿಬ್ಬಂದಿ ನೋಹರ್ ದೇವಾಂಗನ್ ಅವರನ್ನು ಸಹ ಪ್ರಶ್ನಿಸಿದ್ದೇವೆ” ವಿಚಾರಣೆ ನಡೆಯುತ್ತಿದೆ ಎಂದು ಹೇಳಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದು, ಪೊಲೀಸರು ಪರಿಶೀಲನೆ ನಡೆಸಿದ್ದು, ಕ್ಯಾಮೆರಾ ಒಡೆದ ದೃಶ್ಯಗಳು ಪತ್ತೆಯಾಗಿವೆ.

ಮತ್ತೊಂದೆಡೆ ಮಧ್ಯಪ್ರದೇಶದ ಗ್ವಾಲಿಯರ್‌ನ ಚಿತ್ರ ಮಂದಿರದಲ್ಲಿ ಪುಷ್ಪ 2 ಪ್ರದರ್ಶನದ ವೇಳೆ ವ್ಯಕ್ತಿಗಳಿಬ್ಬರ ನಡುವೆ ಜಗಳ ನಡೆದಿದೆ. ಕ್ಯಾಂಟೀನ್ ಮಾಲೀಕ ಹಾಗೂ ಗ್ರಾಹಕನ ನಡುವೆ ವಾದ ವಿವಾದ ಉಂಟಾಗಿ ನಂತರ ಮಾಲೀಕ ಗ್ರಾಹಕನ ಕಿವಿ ಕಚ್ಚಿದ್ದಾನೆ.

ಭಾನುವಾರ ಸಂತ್ರಸ್ತ ಶಬ್ಬೀರ್ ಸಿನಿಮಾದ ಮಧ್ಯಂತರದಲ್ಲಿ ಇಂದರ್‌ಗಂಜ್ ಪ್ರದೇಶದ ಕೈಲಾಶ್ ಟಾಕೀಸ್‌ನ ಕ್ಯಾಂಟೀನ್‌ಗೆ ಆಹಾರ ಖರೀದಿಸಲು ಹೋದಾಗ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕ್ಯಾಂಟೀನ್‌ ಮಾಲೀಕ ರಾಜು ಮತ್ತು ಆತನ ಮೂವರು ಸಹಚರರು ಶಬ್ಬೀರ್‌ನನ್ನು ಥಳಿಸಿದ್ದಾರೆ. ಘಟನೆಯ ಬಗ್ಗೆ ಶಬ್ಬೀರ್ ಸೋಮವಾರ ಪೊಲೀಸರಿಗೆ ದೂರು ನೀಡಿದ್ದು, ಶಬ್ಬೀರ್ ಅವರ ವೈದ್ಯಕೀಯ ವರದಿ ಆಧರಿಸಿ ಮಂಗಳವಾರ ಮೂವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಹೆಚ್ಚುವರಿ ಎಸ್ಪಿ ನಿರಂಜನ್ ಶರ್ಮಾ ಮಾತನಾಡಿ ಆಹಾರ ಪದಾರ್ಥಗಳ ಪಾವತಿ ವಿಚಾರವಾಗಿ ಜಗಳ ಉಂಟಾಗಿದೆ. ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ : Pushpa 2 Collection: ಬಾಕ್ಸ್‌ ಆಫೀಸ್‌ನಲ್ಲಿ ಕೊಂಚ ತಗ್ಗಿದ ‘ಪುಷ್ಪ 2’ ಕಲೆಕ್ಷನ್‌; 2 ದಿನದ ಗಳಿಕೆ ಎಷ್ಟು?