Thursday, 12th December 2024

ಕತಾರಿನಲ್ಲಿ ಭಾರತೀಯ ಕರೆನ್ಸಿ ಬಳಕೆ: ಮೋದಿಗೆ ಗಾಯಕ ಮಿಕಾ ಸಿಂಗ್ ಸೆಲ್ಯೂಟ್

ನವದೆಹಲಿ: ಕತಾರಿನ ದೋಹಾ ವಿಮಾನ ನಿಲ್ದಾಣದಲ್ಲಿ ಭಾರತೀಯ ಕರೆನ್ಸಿ ಬಳಸಲು ಅನುವು ಮಾಡಿಕೊಟ್ಟ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ, ಗಾಯಕ ಮಿಕಾ ಸಿಂಗ್ ಅವರು ಸೆಲ್ಯೂಟ್ ಹೊಡೆದಿದ್ದಾರೆ.
ಮಿಕಾ ಸಿಂಗ್ ಅವರು, ದೋಹಾ ವಿಮಾನ ನಿಲ್ದಾಣದಲ್ಲಿರುವ ಮಳಿಗೆಗೆ ಭೇಟಿ ನೀಡಿದ್ದು, ಈ ವೇಳೆ ಹಲವು ವಸ್ತು ಗಳನ್ನು ಖರೀದಿಸಿದ್ದಾರೆ. ನಂತರ ಭಾರತೀಯ ಕರೆನ್ಸಿ ರೂಪಾಯಿಯಲ್ಲಿಯೇ ಬಿಲ್ ಪಾವತಿಸಿದ್ದಾರೆ. ಭಾರತದ ಕರೆನ್ಸಿಗೆ ಅನುವು ಮಾಡಿಕೊಟ್ಟಿರುವುದಕ್ಕೆ ಮಿಕಾ ಸಿಂಗ್ ಅವರು ಬಹಳ ಸಂತಸ ವ್ಯಕ್ತಪಡಿಸಿದ್ದಾರೆ. ಈ ಕುರಿತು ವಿಮಾನ ನಿಲ್ದಾಣದಿಂದ ಮಿಕಾ ಸಿಂಗ್ ಅವರು, ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ವೀಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ.

ದೋಹಾ ಏರ್ ಪೋರ್ಟ್ನಲ್ಲಿ ಶಾಪಿಂಗ್ ಮಾಡುವಾಗ ಭಾರತೀಯ ರೂಪಾಯಿಗಳನ್ನು ಬಳಸಲು ನನಗೆ ತುಂಬಾ ಹೆಮ್ಮೆ ಎನಿಸಿತು. ಇಲ್ಲಿನ ಯಾವುದೇ ರೆಸ್ಟೊರೆಂಟ್ನಲ್ಲೂ ರೂಪಾಯಿಗಳನ್ನು ಬಳಸಬಹುದು. ಇದು ಅದ್ಭುತವಲ್ಲವೇ?. ನರೇಂದ್ರ ಮೋದಿ ಅವರಿಗೆ ಒಂದು ದೊಡ್ಡ ನಮಸ್ಕಾರ ಎಂದು ಮಿಕಾ ಸಿಂಗ್ ತಮ್ಮ ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಅನೇಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಭಾರತೀಯ ಕರೆನ್ಸಿ ಬಲಗೊಳ್ಳುತ್ತಿದೆ ಎಂದು ಅನೇಕರು ಅಭಿಪ್ರಾಯಿಸಿದ್ದಾರೆ.