ನ್ಯಾಯಾಲಯದ ಆದೇಶ, ಕ್ಯೂನೆಟ್ ಇಂಡಿಯಾ ವಿರುದ್ಧ ’ಹಣಕಾಸು ವಂಚನೆಯ ಸಂತ್ರಸ್ತರ ಕಲ್ಯಾಣ ಸಂಘ’ ನಡೆಸಿರುವ ಕ್ರಿಮಿನಲ್ ಬೆದರಿಕೆ ಉಪಾಯಗಳನ್ನು ಬಹಿರಂಗಪಡಿಸಿದೆ
ವಿಹಾನ್ ಮತ್ತು ಅದರ ವ್ಯಾಪಾರ ಸಹವರ್ತಿಗಳ ವಿಷಯದಲ್ಲಿ ಅವಹೇಳನಕಾರಿ ಹೇಳಿಕೆಗಳನ್ನು ನೀಡುವುದನ್ನು ನಿಷೇಧಿಸುತ್ತದೆ
ತಡೆರಹಿತ ಕ್ಯೂನೆಟ್ ಉತ್ಪನ್ನ ಪೂರೈಕೆಗಳು ನಿರ್ವಿಘನವಾಗಿ ಸಾಗುತ್ತದೆ ಎಂಬುದನ್ನು ದೃಢಪಡಿಸುತ್ತದೆ
ಏಪ್ರಿಲ್ 2, 2024 ರಂದು ಮುಖ್ಯವಾದ ತೀರ್ಪೊಂದರಲ್ಲಿ, ಭಾರತದಲ್ಲಿನ ಕ್ಯೂನೆಟ್ ನ ವಿಶೇಷ ಫ್ರಾಂಚೈಸಿ ಯಾಸ ವಿಹಾನ್ ಡೈರೆಕ್ಟ್ ಸೆಲ್ಲಿಂಗ್ (ಇಂಡಿಯಾ) ಪ್ರೈ. ಲಿಮಿಟೆಡ್, ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ದಿಂದ ನಿರ್ಣಾಯಕ ಆದೇಶವೊಂದನ್ನು ಪಡೆದುಕೊಂಡಿದೆ. ಈ ಆದೇಶ, ಆರ್ಥಿಕ ವಂಚನೆಯ ಸಂತ್ರಸ್ತರ ಕಲ್ಯಾಣ ಸಂಘ ಮತ್ತು ಅದರ ಸದಸ್ಯರಾದ ಗುರುಪ್ರೀತ್‌ಸಿಂಗ್ ಹಿಂದರ್ಜೀತ್‌ಸಿಂಗ್ ಆನಂದ್, ಫಣಿದ್ರಾ, ಅನುಜಾ ಕೊಟೆಚಾ ಮತ್ತು ಸುರೇಂದ್ರ ಮುಖೈತ್ರಾ, ಕ್ಯೂನೆಟ್ ನ ಭಾರತದಲ್ಲಿನ ಕಾರ್ಯಾಚರಣೆಗಳಿಗೆ ಮಸಿ ಬಳಿಯುವ ಅಭಿಯಾನವನ್ನು ಪರಿಣಾಮಕಾರಿಯಾಗಿ ನಿಲ್ಲಿಸುತ್ತದೆ.
ನ್ಯಾಯಾಲಯದ ಮಧ್ಯಂತರ ಆದೇಶ, ಅಸೋಸಿಯೇಷನ್ ಮತ್ತು ಅದರ ಸದಸ್ಯರು ಕ್ಯೂನೆಟ್ ನ ವ್ಯವಹಾರ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಸುಳ್ಳು ಮತ್ತು ಪರಿಶೀಲಿಸದ ಹೇಳಿಕೆಗಳನ್ನು ನೀಡುವುದನ್ನು ನಿಷೇಧಿಸುತ್ತದೆ. ನಿರ್ದಿಷ್ಟವಾಗಿ, ಅವರು ಪತ್ರಿಕಾಗೋಷ್ಠಿಗಳನ್ನು ಆಯೋಜಿಸುವುದನ್ನು ಅಥವಾ ವಿಹಾನ್ ಮತ್ತು ಅದರ ವ್ಯಾಪಾರ ಪಾಲುದಾರರ ಖ್ಯಾತಿಗೆ ಕಳಂಕ ತರುವ ಉದ್ದೇಶದಿಂದ ಮಾನಹಾನಿಕರ ವಿಷಯವನ್ನು ಪ್ರಸಾರ ಮಾಡುವುದನ್ನು ನಿರ್ಬಂಧಿಸಲಾಗಿದೆ.
For over a decade, the defendants have employed criminal intimidation tactics and heralded baseless allegations to undermine QNET and Vihaan’s credibility through various public forums and media channels in India.
ಒಂದು ದಶಕಕ್ಕೂ ಹೆಚ್ಚಿನ ಕಾಲದಿಂದ ಪ್ರತಿವಾದಿಗಳು ಕ್ರಿಮಿನಲ್ ಬೆದರಿಕೆ ತಂತ್ರಗಳನ್ನು ಬಳಸಿದ್ದಾರೆ ಮತ್ತು ಕ್ಯೂನೆಟ್ ಮತ್ತು ವಿಹಾನ್ ವಿಶ್ವಾಸಾರ್ಹತೆಯನ್ನು ದುರ್ಬಲಗೊಳಿಸಲು ಭಾರತದಲ್ಲಿನ ಹಲವಾರು ಸಾಮಾಜಿಕ ವೇದಿಕೆಗಳು ಮತ್ತು ಮಾಧ್ಯಮ ಪ್ರಚಾರಗಳನ್ನು ಬಳಸಿಕೊಂಡು ಅನೇಕ ಆಧಾರರಹಿತ ಆರೋಪಗಳನ್ನು ಮಾಡಿದ್ದಾರೆ. ಸಾಮಾಜಿಕ ಮಾಧ್ಯಮ ಪ್ರಚಾರಗಳು ಮತ್ತು ಸಾರ್ವಜನಿಕ ಪ್ರದರ್ಶನಗಳು ಸೇರಿದಂತೆ ಬ್ರ್ಯಾಂಡ್ ಮೇಲೆ ಅಪವಾದ ಹೊರಿಸುವ ಮತ್ತು ವಿಹಾನ್‌ನ ಉದ್ಯೋಗಿಗಳ ವೃತ್ತಿಪರತೆಯನ್ನು ಕುಗ್ಗಿಸುವ ಗುರಿಯನ್ನು ಹೊಂದಿರುವ ಅನೇಕ ಪ್ರಯತ್ನಗಳು ನಡೆದಿದ್ದವು.
ಮಾರ್ಚ್ 17, 2024 ರಂದು ಹೈದರಾಬಾದ್‌ನಲ್ಲಿ ಅಸೋಸಿಯೇಷನ್ ನಡೇಸಿದ ಇತ್ತೀಚಿನ ಪತ್ರಿಕಾಗೋಷ್ಠಿಗೆ ಪ್ರತಿಕ್ರಿಯೆಯಾಗಿ ನ್ಯಾಯಾಲಯದ ತೀರ್ಪು ಬಂದಿದೆ. ಅಲ್ಲಿ ಅವರು ಭಾರತದಲ್ಲಿನ ಕ್ಯೂನೆಟ್ ನ ವ್ಯಾಪಾರ ಕಾರ್ಯಾಚರಣೆಗಳಿಗೆ ಕಳಂಕ ತರಲು ಪ್ರಯತ್ನಿಸಿದ್ದರು. ಏಪ್ರಿಲ್ 2 ರ ಆದೇಶ ಈ ಆರೋಪಗಳನ್ನು ನಿಸ್ಸಂದಿಗ್ಧವಾಗಿ ತಿರಸ್ಕರಿಸುತ್ತದೆ ಮತ್ತು ಸಂಘದ ಪ್ರಚಾರ ತಂತ್ರಗಳನ್ನು ಖಂಡಿಸುತ್ತದೆ.
ನ್ಯಾಯಾಲ ಪ್ರತಿವಾದಿಗಳ ಕ್ರಮಗಳನ್ನು ’ಬ್ಲ್ಯಾಕ್‌ಮೇಲ್’ ಎಂದು ಖಂಡಿಸಿತು ಮತ್ತು ವಾಕ್ ಸ್ವಾತಂತ್ರ್ಯ ಇದೆ ಎಂದಾಕ್ಷಣಕ್ಕೆ ಕಾನೂನಿನ ಮಿತಿಯೊಳಗೆ ಕಾರ್ಯನಿರ್ವಹಿಸುವ ಕಾನೂನುಬದ್ಧ ವ್ಯವಹಾರಗಳ ವಿರುದ್ಧ ಮಾನಹಾನಿಕರ ಹೇಳಿಕೆಗಳನ್ನು ನೀಡುವುದಕ್ಕೆ ಬರುವುದಿಲ್ಲ ಎಂದು ಒತ್ತಿಹೇಳಿತು. “ಪ್ರತಿವಾದಿಗಳು ವ್ಯಕ್ತಪಡಿಸಿದ ಮಾತುಗಳು ವಿಪರೀತ ಮತ್ತು ಆಘಾತಕಾರಿ. ಇದು, ಈ ನ್ಯಾಯಾಲಯದ ಕಾನೂನಿನ ನಿಬಂಧನೆಗಳ ಅಡಿಯಲ್ಲಿ ನೋಂದಾಯಿಸಿಕೊಂಡು ಕೆಲಸ ಮಾಡುತ್ತಿರುವ ಕಂಪನಿ ಯನ್ನು ಬ್ಲ್ಯಾಕ್‌ಮೇಲ್ ಮಾಡುವ ಸ್ಪಷ್ಟವಾದ ಪ್ರಕರಣವಾಗಿರುತ್ತದೆ. ಪ್ರತಿವಾದಿಗಳು ವಾಕ್ ಸ್ವಾತಂತ್ರ್ಯದ ಸೋಗಿನಲ್ಲಿ ಯಾರ, ಫಿರ್ಯಾದಿ ಕಂಪನಿಯೂ ಸೇರಿದಂತೆ, ವಿರುದ್ಧವೂ ಅಂತಹ ಮಾನಹಾನಿಕರ ಮತ್ತು ಅವಹೇಳನಕಾರಿ ಹೇಳಿಕೆಗಳನ್ನು ನೀಡಲು ಸಾಧ್ಯವಿಲ್ಲ,” ಎಂದು ನ್ಯಾಯಾಲಯವು ಹೇಳಿದೆ.
ಟಿಸಿಐ ಕಾರ್ಪೊರೇಶನ್‌ನಂತಹ ಸೇವಾ ಪೂರೈಕೆದಾರರು ಮತ್ತು ಬ್ಲೂ ಡಾರ್ಟ್ ಮತ್ತು ಇಂಡಿಯಾ ಪೋಸ್ಟ್‌ನಂತಹ ಲಾಜಿಸ್ಟಿಕ್ ಪಾಲುದಾರರ ಮೇಲೆ ಒತ್ತಡ ಹೇರುವ ಮೂಲಕ ಕ್ಯೂನೆಟ್ ನ ಪೂರೈಕೆ ಸರಪಳಿಯನ್ನು ಅಡ್ಡಿಪಡಿಸಲು ಅಸೋಸಿಯೇಷನ್ ಪ್ರಯತ್ನಗಳನ್ನು ಮಾಡಿರುವ ಬಗ್ಗೆ ನ್ಯಾಯಾಲಯ ಬಹಿರಂಗಪಡಿಸಿದೆ. ಆದರೆ, ಅಸೋಸಿಯೇಶನ್‌ನ ಹೇಳಿಕೆಗಳನ್ನು ತಳ್ಳಿಹಾಕಿ ರುವುದರಿಂದ ಸೇವೆಗಳು ಅಡೆತಡೆಯಿಲ್ಲದೆ ಮುಂದುವರಿಯುತ್ತದೆ ಎಂದು ತನಿಖೆಗಳು ಬಹಿರಂಗಪಡಿಸಿದವು. ವಿಹಾನ್ ಪರವಾಗಿರುವ ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶ ಡಬ್ಲ್ಯೂ.ಪಿ. 7603/2024 ದಿನಾಂಕ 13/03/2024 ಪ್ರಕಾರ, ಭಾರತೀಯ ಅಂಚೆ ಸೇವೆಗಳು ಮುಂದುವರಿಯುತ್ತವೆ.
ಇದಲ್ಲದೆ, ಭಾರತದಲ್ಲಿ ಕ್ಯೂನೆಟ್, ಕಾನೂನುಬಾಹಿರ ಪಿರಮಿಡ್ ಅಥವಾ ಪಾಂಜಿ ಸ್ಕೀಮ್‌ಗಳನ್ನು ನಡೆಸುತ್ತಿದೆ ಎಂಬ ಆರೋಪಗಳನ್ನು ಹಿಂದಿನ ಕಾನೂನು ಪ್ರಕ್ರಿಯೆಗಳು ಈಗಾಗಲೇ ತಳ್ಳಿಹಾಕಿವೆ ಎಂದೂ ನ್ಯಾಯಾಲಯ ಟೀಕಿಸಿದೆ. ಸುಪ್ರೀಂ ಕೋರ್ಟ್‌ನ ಸ್ಟೇ ಆರ್ಡರ್ (ಮಾರ್ಚ್ 2017 ರಷ್ಟು ಹಿಂದಿನದು) ಮತ್ತು ಕರ್ನಾಟಕ ಹೈಕೋರ್ಟ್‌ನ ಎಫ್‌ಐಆರ್-ಕ್ವಾಷಿಂಗ್ ಆರ್ಡರ್ (ಫೆಬ್ರವರಿ 2017) ಎರಡೂ ವಿಹಾನ್ ಅವರ ವ್ಯವಹಾರ ಕಾರ್ಯಾಚರಣೆಗಳ ನ್ಯಾಯಸಮ್ಮತತೆಯ ಬಗ್ಗೆ ಸೂಚಿಸುತ್ತವೆ, ಯಾವುದೇ ಗುಪ್ತ ತಪ್ಪುಗಳಾಗಿವೆ ಎಂಬುದನ್ನು ನಿರಾಕರಿಸುತ್ತವೆ.
ಕ್ಯೂನೆಟ್ ಅಥವಾ ವಿಹಾನ್ ಅವರನ್ನು ಆತ್ಮಹತ್ಯೆಯಂತಹ ಯಾವಿದೇ ದುರ್ಘಟನೆಗಳಿಗೆ ತಳಕು ಹಾಕುವ ಯಾವುದೇ ಆರೋಪವು ಆಧಾರರಹಿತವಾಗಿದೆ ಮತ್ತು ಅದಕ್ಕೆ ಯಾವುದೇ ಬೆಲೆ ಇಲ್ಲ. 26 ವರ್ಷಗಳ ಪರಂಪರೆಯನ್ನು ಹೊಂದಿರುವ ಕ್ಯೂನೆಟ್, ತನ್ನ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ತಲುಪಿಸಲು ಮತ್ತು ಭಾರತದಾದ್ಯಂತ ತನ್ನ ಸ್ವತಂತ್ರ ವಿತರಕರನ್ನು ಬೆಂಬಲಿಸಲು ಬದ್ಧವಾಗಿದೆ.
ನ್ಯಾಯಾಲಯದ ಈ ಆದೇಶ ಕ್ಯೂನೆಟ್ ಗೆ ಒಂದು ಮಹತ್ವದ ವಿಜಯವನ್ನು ಸೂಚಿಸುತ್ತದೆ ಮತ್ತು ಸಾರ್ವಜನಿಕವಾಗಿ ಮಾತನಾಡುವಾಗ ಸತ್ಯ ಮತ್ತು ನ್ಯಾಯಸಮ್ಮತತೆಗಳನ್ನು ಎತ್ತಿಹಿಡಿಯಬೇಕು ಎನ್ನುವುದನ್ನು ಒತ್ತಿಹೇಳುತ್ತದೆ. ಕ್ಯೂನೆಟ್ ಉದ್ಯಮಶೀಲತೆಯ ಮೂಲಕ ವ್ಯಕ್ತಿಗಳನ್ನು ಸಬಲೀಕರಣಗೊಳಿಸುವ ತನ್ನ ಧ್ಯೇಯವನ್ನು ಮುಂದುವರೆಸುತ್ತಿದೆ. ಸಮಗ್ರತೆ ಮತ್ತು ಪಾರದರ್ಶಕತೆಗೆ ಅದರ ಬದ್ಧತೆ ಇನ್ನಷ್ಟು ದೃಢವಾಗಿದೆ.