Friday, 22nd November 2024

Rahul Gandhi Controversy: ಸಿಖ್ಖರ ಬಗ್ಗೆ ರಾಹುಲ್‌ ವಿವಾದಾತ್ಮಕ ಹೇಳಿಕೆ; ಸೋನಿಯಾ ನಿವಾಸದೆದುರು ಭಾರೀ ಪ್ರೊಟೆಸ್ಟ್‌

Rahul Gandhi Controversy

ಹೊಸದಿಲ್ಲಿ: ಅಮೆರಿಕದಲ್ಲಿ ವಿಪಕ್ಷ ನಾಯಕ ರಾಹುಲ್‌ ಗಾಂಧಿ(Rahul Gandhi Controversy) ಸಿಖ್‌ಗಳ ಬಗ್ಗೆ ನೀಡಿರುವ ಹೇಳಿಕೆಯೊಂದು ಭಾರೀ ವಿವಾದಕ್ಕೀಡಾಗುತ್ತಿದ್ದಂತೆ ಬಿಜೆಪಿ ಬೆಂಬಲಿತ ಸಿಖ್ ಸಮುದಾಯ ದೆಹಲಿಯಲ್ಲಿರುವ ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ(Sonia Gandhi) ಅವರ ನಿವಾಸದ ಎದುರು ಪ್ರತಿಭಟನಾ ನಡೆಸಿದ್ದಾರೆ. ದೇಶದಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಕುರಿತು ಯುಎಸ್‌ನಲ್ಲಿ ರಾಹುಲ್ ಗಾಂಧಿ ಅವರ ಹೇಳಿಕೆಯನ್ನು ವಿರೋಧಿಸಿ ಸಿಖ್‌ ಸಮುದಾಯ ಭಾರೀ ಆಕ್ರೋಶ ವ್ಯಕ್ತಪಡಿಸಿದೆ. ಅಲ್ಲದೇ ರಾಹುಲ್‌ ಗಾಂಧಿ ತಕ್ಷಣ ಕ್ಷಮೆಯಾಚಿಸುವಂತೆ ಒತ್ತಾಯಿಸಿದ್ದಾರೆ.

ರಾಹುಲ್‌ ಹೇಳಿದ್ದೇನು?

ವರ್ಜೀನಿಯಾದಲ್ಲಿ ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡಿದ ರಾಹುಲ್‌ ಗಾಂಧಿ, ಭಾರತದಲ್ಲಿ ಹೋರಾಟ ರಾಜಕೀಯಕ್ಕೆ ಸಂಬಂಧಿಸಿದ್ದಲ್ಲ. ಅದು ಮೇಲ್ನೋಟಕ್ಕೆ ಕಾಣುತ್ತದೆ ಅಷ್ಟೆ. ಸಭೆಯ ಮುಂದಿನ ಸಾಲಿನಲ್ಲಿ ಕುಳಿತ ಸಿಖ್ ಧರ್ಮೀಯರಲ್ಲಿ ಒಬ್ಬರಿಗೆ ತಮ್ಮ ಹೆಸರು ಹೇಳುವಂತೆ ರಾಹುಲ್ ಗಾಂಧಿ ಹೇಳಿದಾಗ, ಟರ್ಬನ್‌(ಪೇಟ) ಧರಿಸಿದ ಅಣ್ಣ ನಿಮ್ಮ ಹೆಸರೇನು ಎಂದು ಕೇಳಿದರು. ಭಾರತದಲ್ಲಿ ಸಿಖ್ಖರು ಪೇಟವನ್ನು ಧರಿಸಲು ಅಥವಾ ಅನುಮತಿ ನೀಡಬಹುದೇ ಬೇಡವೇ, ಅಥವಾ ಅವರು ಸಿಖ್ಖರು ಗುರುದ್ವಾರಕ್ಕೆ ಹೋಗಲು ಸಾಧ್ಯವೇ ಎಂಬುದಕ್ಕಾಗಿ ಹೋರಾಟವಾಗಿದೆ. ಇದು ಕೇವಲ ಒಂದು ಧರ್ಮದಲ್ಲಿ ಅಲ್ಲ, ಎಲ್ಲಾ ಧರ್ಮದಲ್ಲಿ ಇಂತಹ ಹೋರಾಟ, ಸಂಘರ್ಷಗಳಿವೆ ಎಂದು ಹೇಳಿದ್ದಾರೆ.

ಬಿಜೆಪಿ ಕಿಡಿ

ರಾಹುಲ್ ಅವರ ಈ ಹೇಳಿಕೆಗೆ ಬಿಜೆಪಿ ಕೆಂಡಾಮಂಡಲವಾಗಿದೆ. ರಾಹುಲ್‌ ಗಾ‍ಂಧಿ ವಿದೇಶಿ ನೆಲದಲ್ಲಿ ನಿಂತು ಭಾರತದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಬಿಜೆಪಿ ನಾಯಕರು ಕಿಡಿ ಕಾರಿದ್ದಾರೆ. ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಪ್ರತಿಕ್ರಿಯಿಸಿದ್ದು, ರಾಹುಲ್ ಗಾಂಧಿ ಸತ್ಯವನ್ನು ತಿಳಿಯದೆ ಮಾತನಾಡುತ್ತಾರೆ. ನಮ್ಮ ಏಕತೆ ಮತ್ತು ವೈವಿಧ್ಯತೆ ಧಕ್ಕೆಯನ್ನುಂಟು ಮಾಡುವ ರೀತಿಯಲ್ಲಿ ಹೇಳಿಕೆ ನೀಡುತ್ತಿದ್ದಾರೆ. ಕಾಂಗ್ರೆಸ್ ಆಡಳಿತದಲ್ಲಿ ಸಂಭವಿಸಿದ 1984 ರ ಗಲಭೆಯ ಸಮಯದಲ್ಲಿ ಸಮುದಾಯವು ಪೇಟ ಮತ್ತು ಕದ ಧರಿಸಲು ಹೆದರುತ್ತಿದ್ದರು ಎಂದು ತಿರುಗೇಟು ಕೊಟ್ಟಿದ್ದಾರೆ.

ಈ ಸುದ್ದಿಯನ್ನೂ ಓದಿ: Rahul Gandhi: INDI ಅಲಯನ್ಸ್ ಅಥವಾ INDIA ಅಲಯನ್ಸ್? ವಿದ್ಯಾರ್ಥಿಯ ಪ್ರಶ್ನೆಗೆ ತಡವರಿಸಿದ ರಾಹುಲ್‌ ಗಾಂಧಿ- ಈ ವಿಡಿಯೋ ಭಾರೀ ವೈರಲ್‌