Thursday, 12th December 2024

ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಲು ರಾಹುಲ್‌ ಗಾಂಧಿ ಸಮರ್ಥರು: ಭೂಪೇಷ್ ಬಘೆಲ್ 

ನವದೆಹಲಿ: ಯಾವುದೇ ಒತ್ತಡಕ್ಕೆ ಮಣಿಯದೇ ಪ್ರಮುಖ ವಿಷಯಗಳಿಗೆ ಸಂಬಂಧಿಸಿ ದೃಢ ನಿರ್ಧಾರ ತಳೆಯುವ ರಾಹುಲ್‌ ಗಾಂಧಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಲು ಸಮರ್ಥರು ಎಂದು ಛತ್ತೀಸಗಡದ ಮುಖ್ಯಮಂತ್ರಿ ಭೂಪೇಷ್ ಬಘೆಲ್  ಪ್ರತಿಪಾದಿಸಿದ್ದಾರೆ.

ರಾಹುಲ್‌ ಗಾಂಧಿ ಅವರೇ ಅಧ್ಯಕ್ಷರಾಗಲು ಇದು ಪಕ್ಷ ಸಮಯ. ಪಕ್ಷದ ರಾಜ್ಯ ಘಟಕದ ಸಭೆಯಲ್ಲಿ ಮಂಡಿಸಿದ್ದು, ಸಭೆ ಅನು ಮೋದಿಸಿದೆ. ಈ ಮೂಲಕ ಒಂದು ವಾರದ ಅಂತರದಲ್ಲಿ ನಿರ್ಣಯ ಅಂಗೀಕರಿಸಿದ ಎರಡನೇ ರಾಜ್ಯ ಛತ್ತೀಸಗಡ ಆಗಿದೆ.

ರಾಹುಲ್‌ ಗಾಂಧಿ ಆ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿಯೇ ಎಂಬ ಪ್ರಶ್ನೆಗೆ ‘ಅವರಲ್ಲದೆ ಮತ್ಯಾರು? ರಾಹುಲ್‌ ಹೊರತುಪಡಿಸಿ ಬೇರೆ ನಾಯಕರು ರಾಷ್ಟ್ರದಾದ್ಯಂತ ಪ್ರವಾಸ ಮಾಡಿದ್ದಾರೆಯೇ’ ಎಂದು ಪ್ರಶ್ನಿಸಿದರು.