Thursday, 12th December 2024

Rahul Gandhi : ರಾಹುಲ್‌ ಗಾಂಧಿ ಅಪ್ಪ ರಾಜೀವ್‌ ಗಾಂಧಿಗಿಂತಲೂ ಚತುರ ಎಂದು ಹೊಗಳಿದ ಸ್ಯಾಮ್‌ ಪಿತ್ರೋಡಾ

Rahul Gandhi

ನವದೆಹಲಿ: ಸಂಸದ ಹಾಗೂ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ತಮ್ಮ ತಂದೆ ರಾಜೀವ್ ಗಾಂಧಿಗೆ (Rahul Gandhi) ಹೋಲಿಸಿದರೆ ಹೆಚ್ಚು ಬುದ್ಧಿಜೀವಿ ಮತ್ತು ಹೆಚ್ಚು ಚತುರ ಎಂದು ಗಾಂಧಿ ಕುಟುಂಬದ ದೀರ್ಘಕಾಲದ ವಿಶ್ವಾಸಾರ್ಹ ವ್ಯಕ್ತಿ ಸ್ಯಾಮ್ ಪಿತ್ರೋಡಾ ಹೇಳಿದ್ದಾರೆ.  ಸಂದರ್ಶನವೊಂದರಲ್ಲಿ ಮಾತನಾಡಿದ ಪಿತ್ರೋಡಾ, ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಭವಿಷ್ಯದ ಪ್ರಧಾನಿಯಾಗುವ ಎಲ್ಲ ಗುಣಗಳನ್ನು ಹೊಂದಿದ್ದಾರೆ ಎಂದು ಪ್ರತಿಪಾದಿಸಿದ್ದಾರೆ.

ಇಂಡಿಯನ್ ಓವರ್ಸೀಸ್ ಕಾಂಗ್ರೆಸ್ ಅಧ್ಯಕ್ಷ ಪಿತ್ರೋಡಾ ಅವರು ಈ ಹಿಂದೆ ರಾಹುಲ್ ಗಾಂಧಿ ವಿದೇಶ ಪ್ರವಾಸದ ಸಂದರ್ಭದಲ್ಲಿ ಬಿಜೆಪಿಯಿಂದ ಎದುರಿಸಿದ್ದ ಟೀಕೆಗಳನ್ನು”ನಕಲಿ” ಎಂದು ಹೇಳಿದ್ದಾರೆ. ಮುಂದಿನ ವಾರ ರಾಹುಲ್ ಗಾಂಧಿ ಅವರ ಅಮೆರಿಕ ಭೇಟಿ ನೀಡಲಿದ್ದಾರೆ.  ಈ ಹಿನ್ನೆಲೆಯಲ್ಲಿ ಮಾತನಾಡಿದ ಪಿತ್ರೋಡಾ, ಅವರು ತಮ್ಮ ಸರ್ಕಾರಿ ಕಾರ್ಯಕ್ರಮದಡಿ ಅಮೆರಿಕಕ್ಕೆ ಹೋಗುತ್ತಿಲ್ಲ. ಕ್ಯಾಪಿಟಲ್ ಹಿಲ್ಸ್‌ನಲ್ಲಿ ವಿಭಿನ್ನ ಜನರೊಂದಿಗೆ ಸಂವಹನ ನಡೆಸಲು ಹೋಗುತ್ತಿದ್ದಾರೆ ಎಂದು ಹೇಳಿದ್ದಾರೆ.

ರಾಹುಲ್ ಗಾಂಧಿ ಖಂಡಿತವಾಗಿಯೂ ನ್ಯಾಷನಲ್ ಪ್ರೆಸ್ ಕ್ಲಬ್‌ನಲ್ಲಿ ಮಾಧ್ಯಮಗಳೊಂದಿಗೆ ಸಂವಹನ ನಡೆಸಲಿದ್ದಾರೆ. ಅವರು ಬುದ್ಧಿವಂತ ಜನರನ್ನು ಭೇಟಿಯಾಗಲಿದ್ದಾರೆ. ವಾಷಿಂಗ್ಟನ್ ಡಿಸಿಯಲ್ಲಿ  ಜಾರ್ಜ್‌ಟೌನ್‌ ವಿಶ್ವವಿದ್ಯಾಲಯದಲ್ಲಿ ಸಂವಾದ ನಡೆಸಲಿದ್ದಾರೆ ಎಂದು ಪಿತ್ರೋಡಾ ಚಿಕಾಗೊದಿಂದ ಮಾತನಾಡುತ್ತಾ ಹೇಳಿದ್ದಾರೆ.

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮತ್ತು ರಾಹುಲ್ ಗಾಂಧಿ ನಡುವಿನ ಹೋಲಿಕೆಗಳು  ಬಗ್ಗೆ  ಮಾತನಾಡಿದ ಪಿತ್ರೋಡಾ, ರಾಜೀವ್ ಗಾಂಧಿ, ಪಿ.ವಿ.ನರಸಿಂಹ ರಾವ್, ಮನಮೋಹನ್ ಸಿಂಗ್, ವಿ.ಪಿ.ಸಿಂಗ್, ಚಂದ್ರಶೇಖರ್ ಮತ್ತು ಎಚ್.ಡಿ.ದೇವೇಗೌಡ ಅವರಂತಹ ಹಲವಾರು ಪ್ರಧಾನ ಮಂತ್ರಿಗಳೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದೇನೆ. ಅವರೆಲ್ಲರ ಗುಣಗಳ ಬಗ್ಗೆಯೂ ಗೊತ್ತಿದೆ ಎಂದು ಹೇಳಿದ್ದಾರೆ.  ನನಗೆ ಅನೇಕ ಪ್ರಧಾನ ಮಂತ್ರಿಗಳನ್ನು ಹತ್ತಿರದಿಂದ ನೋಡುವ ಅವಕಾಶ ಸಿಕ್ಕಿತು. ಆದರೆ ರಾಹುಲ್ ಮತ್ತು ರಾಜೀವ್ ನಡುವಿನ ವ್ಯತ್ಯಾಸವೆಂದರೆ ರಾಹುಲ್ ಹೆಚ್ಚು ಬುದ್ಧಿಜೀವಿ, ಚಿಂತಕ, ರಾಜೀವ್ ಸ್ವಲ್ಪ ಹೆಚ್ಚು ಕೆಲಸ ಮಾಡುವವರು.  ಅವರು ಜನರ ಬಗ್ಗೆ ಒಂದೇ ರೀತಿಯ ಕಾಳಜಿ ಹೊಂದಿದ್ದಾರೆ.  ಉತ್ತಮ ಭಾರತವನ್ನು ನಿರ್ಮಾಣವನ್ನು ಪ್ರಾಮಾಣಿಕವಾಗಿ ನಂಬುತ್ತಾರೆ. ಅವರು ನಿಜವಾದ ಸರಳ ವ್ಯಕ್ತಿ. ಅವರಿಗೆ ದೊಡ್ಡ ವೈಯಕ್ತಿಕ ಅಗತ್ಯಗಳಿಲ್ಲ” ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Saffron Controversy : ಕಾಂಗ್ರೆಸ್‌ಗೆ ಸೆಡ್ಡು; ಮತ್ತೆ ಕೇಸರಿ ಬಣ್ಣದ ಸೈಕಲ್‌ ವಿತರಿಸಿದ ರಾಜಸ್ಥಾನ ಸರ್ಕಾರ

ರಾಜೀವ್‌ ಹಾಗೂ ರಾಹುಲ್‌ ಅವರ ಮೂಲಭೂತ ಆಶಯಗಳು ಸ್ಪಷ್ಟವಾಗಿವೆ. ಇಬ್ಬರೂ ಕಾಂಗ್ರೆಸ್ ಪಕ್ಷವು ರೂಪಿಸಿದ ಮತ್ತು ಪಕ್ಷದ ಪ್ರತಿಯೊಬ್ಬ ನಾಯಕ ನಂಬಿದ್ದ “ಭಾರತದ ಕಲ್ಪನೆಯ ರಕ್ಷಕರು” ಎಂದು ಪಿತ್ರೋಡಾ ಹೇಳಿದ್ದಾರೆ.  ರಸಿಂಹ ರಾವ್ ಅವರೂ ಅದನ್ನು ನಂಬಿದ್ದರು.  ಮಲ್ಲಿಕಾರ್ಜುನ್ ಖರ್ಗೆ ಅವರೂ ನಂಬುತ್ತಾರೆ ಎಂದು ಹೇಳಿದರು. ರಾಹುಲ್ ಗಾಂಧಿ ಅವರ ವ್ಯಕ್ತಿತ್ವ ಎರಡು ಭಾರತ್ ಜೋಡೋ ಯಾತ್ರೆಗಳಿಂದ ಹೆಚ್ಚಾಗಿದೆ ಎಂದು ಅವರು ಹೇಳಿದರು.

ರಾಹುಲ್‌ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸುವ್ಯವಸ್ಥಿತ ತಪ್ಪು ಅಭಿಯಾನ ನಡೆಸಲಾಗಿದೆ.  ಯುವ ನಾಯಕನನ್ನು ಕೆಟ್ಟದಾಗಿ ಬಿಂಬಿಸಲು ಕೋಟ್ಯಂತರ ರೂಪಾಯಿ ಖರ್ಚು ಮಾಡಲಾಗಿದೆ.  ಉನ್ನತ ಶಿಕ್ಷಣ ಪಡೆದ ರಾಹುಲ್‌ ಕಾಲೇಜಿಗೆ ಹೋಗಲಿಲ್ಲ ಎಂದು ಜನರು ಹೇಳುವಂತೆ ಮಾಡಲಾಗಿದೆ.  ಅದೊಂದು ಸುಳ್ಳುಗಳ ಚಿತ್ರಣ. ರಾಹುಲ್ ಗಾಂಧಿ  ದೀರ್ಘಕಾಲ ಹೋರಾಡಿ ವ್ಯಕ್ತಿತ್ವ ಗಳಿಸಿಕೊಂಡಿದ್ದಾರೆ. ಆ ರೀತಿ ಮಾಡಲು ಯಾರಿಗೂ ಸಾಧ್ಯವಾಗುತ್ತಿರಲಿಲ್ಲ” ಎಂದು ಪಿತ್ರೋಡಾ ಹೇಳಿದರು.

ರಾಹುಲ್ ಗಾಂಧಿಯನ್ನು ಭವಿಷ್ಯದ ಪ್ರಧಾನಿಯಾಗಿ ನೋಡುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಪಿತ್ರೋಡಾ, ಅದನ್ನು ಜನರು ನಿರ್ಧರಿಸುತ್ತಾರೆ ಎಂದು ಹೇಳಿದರು  ನನ್ನ ವೈಯಕ್ತಿಕ ಅನುಭವದಿಂದ ರಾಹುಲ್‌  ಸಮರ್ಥರು ಎಂದು ನಾನು ಭಾವಿಸುತ್ತೇನೆ. ಅವರು ಸಭ್ಯ ಮನುಷ್ಯ, ಅವರು ಉತ್ತಮ ಶಿಕ್ಷಣ ಪಡೆದಿದ್ದಾರೆ.  ಕಾಂಗ್ರೆಸ್ ಯಾವಾಗಲೂ ಉತ್ತೇಜಿಸುವ ಪ್ರಜಾಪ್ರಭುತ್ವದ ಕಲ್ಪನೆಯ ರಕ್ಷಕರಾಗಿ ನಾನು ಅವರನ್ನು ನೋಡುತ್ತೇನೆ” ಎಂದು ಅವರು ಹೇಳಿದರು.