Sunday, 15th December 2024

ರಾಹುಲ್ ಗಾಂಧಿ ಅವರನ್ನು ಮದುವೆಯಾಗಲು ಸಿದ್ದಳಿದ್ದೇನೆ: ನಟಿ ಶೆರ್ಲಿನ್ ಹೇಳಿಕೆ ವೈರಲ್

ವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ನಾನು ಮದುವೆಯಾಗಲು ಸಿದ್ದಳಿದ್ದೇನೆ. ಆದರೆ ಮದುವೆಯಾದರೆ ನನ್ನ ಉಪನಾಮೆಯನ್ನು ಬದಲಾಯಿಸುವುದಿಲ್ಲ ಎಂದು ಬಾಲಿವುಡ್ ನಟಿ ಶೆರ್ಲಿನ್ ಚೋಪ್ರಾ ನೀಡಿರುವ ಹೇಳಿಕೆ ವೈರಲ್ ಆಗಿದೆ.

ಸಾಮಾಜಿಕ ಮಾಧ್ಯಮದಲ್ಲಿ ನಟಿ ಶಾರ್ಲಿನ್ ಅವರ ಹೇಳಿಕೆಗಳು ವೈರಲ್ ಆಗುವುದು ಸಾಮಾನ್ಯವಾಗಿದೆ. ಶೆರ್ಲಿನ್ ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದರು. ಇದೀಗ ರಾಹುಲ್ ಅವರನ್ನು ಮದುವೆಯಾಗುತ್ತೇನೆ ಎಂಬ ಹೇಳಿಕೆ ಸಾಕಷ್ಟು ವೈರಲ್ ಆಗುತ್ತಿದೆ.

ಕೆಲವು ದಿನಗಳ ಹಿಂದೆ ಹರಿಯಾಣದ ಕೆಲವು ಮಹಿಳೆಯರು ಸೋನಿಯಾ ಅವರ ನಿವಾಸಕ್ಕೆ ಬಂದಿದ್ದರು. ಆ ಸಮಯದಲ್ಲಿಯೂ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರ ವಿವಾಹದ ಬಗ್ಗೆ ಪ್ರಸ್ತಾಪವಿತ್ತು.

ರಾಹುಲ್ ಅವರನ್ನು ಮದುವೆಯಾಗುತ್ತೀರಾ ಎಂದು ಶೆರ್ಲಿನ್ ಅವರನ್ನು ಕೇಳಿದಾಗ, ಅವರು ತಕ್ಷಣ ಯಾವುದೇ ಹಿಂಜರಿಕೆಯಿಲ್ಲದೆ ಹೌದು ಎಂದು ಹೇಳಿದರು. ರಾಹುಲ್ ಗಾಂಧಿಯನ್ನು ಏಕೆ ಮದುವೆಯಾಗಬಾರದು? ಅವರನ್ನು ಮದುವೆಯಾಗಲು ನಾನು ಒಪ್ಪಿಕೊಂಡಿದ್ದೇನೆ. ಆದರೆ ಒಂದು ಷರತ್ತು. ನಾನು ಮದುವೆಯ ನಂತರವೂ, ಉಪನಾಮವನ್ನು ಚೋಪ್ರಾ ಎಂದು ಹೊಂದಲು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ.

ವೀಡಿಯೊಗೆ ಸಂಬಂಧಿಸಿದ ಹಲವಾರು ಪೋಸ್ಟ್ಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ಶೆರ್ಲಿನ್ ಅವರ ಹೇಳಿಕೆಗೆ ಕಾಂಗ್ರೆಸ್ ಬೆಂಬಲಿಗರು ಟ್ರೋಲ್ ಮಾಡುತ್ತಿದ್ದಾರೆ.