ಘಾಜಿಯಾಬಾದ್: ಕೃಷಿ ಕಾಯ್ದೆ ವಿರೋಧಿಸಿ ನಡೆಯಲಿರುವ ರೈಲು ರೋಕೋ ಚಳವಳಿ ಶಾಂತಿಯುತವಾಗಿ ನಡೆಯಲಿದ್ದು, ಪ್ರತಿಭಟನ ನಿರತರಿಗೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗುತ್ತದೆ ಎಂದು ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕೈತ್ ಹೇಳಿದ್ದಾರೆ.
ಮಧ್ಯಾಹ್ನ 3-4 ಗಂಟೆಯವರೆಗೆ ಮುಂದುವರೆಯಲಿದೆ. ರೈಲುಗಳು ಚಲಿಸಲು ಬಿಡುವುದಿಲ್ಲ. ಶಾಂತಿಯುತವಾಗಿಯೇ ಪ್ರತಿಭಟನೆ ನಡೆಯಲಿದೆ. ಪ್ರತಿಭಟನೆ ವೇಳೆ ಸಂಕಷ್ಟಕ್ಕೆ ಸಿಲುಕುವ ಜನರಿಗೆ ನೀರು, ಹಾಲು, ಲಸ್ಸಿ ಹಾಗೂ ಹಣ್ಣಿನ ವ್ಯವಸ್ಥೆಗಳನ್ನು ಮಾಡಲಾ ಗುತ್ತದೆ. ಜನರಿಗೆ ನಮ್ಮ ಸಂಕಷ್ಟಗಳನ್ನು ವಿವರಿಸಲಾಗುತ್ತದೆ ಎಂದು ಹೇಳಿದ್ದಾರೆ.
ಹಿಸಾರ್ ನಲ್ಲಿ ರ್ಯಾಲಿ ನಡೆಸುತ್ತಿದ್ದೇವೆ. ನಾಳೆ ಮುಂಬೈನಲ್ಲಿ ಪ್ರತಿಭಟನೆ ನಡೆಸುತ್ತಿದ್ದೇವೆ. ಇದೇ ರೀತಿ ದೇಶದ ಪ್ರತೀ ಮೂಲೆ ಮೂಲೆಯಲ್ಲಿಯೂ ಪ್ರತಿಭಟನೆ ನಡೆಸುತ್ತೇವೆ. ದೇಶದ ಪ್ರತೀಯೊಂದು ಪ್ರದೇಶದಲ್ಲಿಯೂ ರೈತರು ಸಂಕಷ್ಟವನ್ನು ಅನುಭವಿಸು ತ್ತಿದ್ದಾರೆ. ರೈತರ ಸಮಸ್ಯೆಗಳನ್ನು ದೂರಾಗಿಸುವುದು ನಮ್ಮ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.