ನವದೆಹಲಿ: ದೆಹಲಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ಮಳೆಯ ಅಬ್ಬರಕ್ಕೆ ಭಾನುವಾರ ಸರ್ಕಾರಿ ಶಾಲೆಯೊಂದರ ಗೋಡೆ ಕುಸಿದು ಬಿದ್ದಿದೆ.
ಈ ಶಾಲೆಯನ್ನು ಕಳೆದ ನಾಲ್ಕು ತಿಂಗಳ ಹಿಂದೆಷ್ಟೇ ಮರು ನಿರ್ಮಾಣ ಮಾಡಲಾಗಿತ್ತು ಎಂದು ತಿಳಿದುಬಂದಿದೆ.
ಘಟನೆಯ ಕುರಿತು ಪ್ರತಿಕ್ರಿಯೆ ನೀಡಿದ ದೆಹಲಿ ಪೋಷಕರ ಸಂಘದ ಅಧ್ಯಕ್ಷ ಅಪರಾಜಿತಾ ಗೌತಮ್, ‘ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಕೊಡುವ ಜೊತೆಗೆ ಶಾಲೆಯ ಮೂಲಸೌಕರ್ಯದ ಗುಣಮಟ್ಟದ ಬಗ್ಗೆಯೂ ಗಮನಹರಿಸಬೇಕಿದೆ’ ಎಂದರು
ಆಮ್ ಆದ್ಮಿ ಪಕ್ಷ ವಿಶ್ವದರ್ಜೆಯ ಶಿಕ್ಷಣ ನೀಡುವ ಬಗ್ಗೆ ಮಾತನಾಡುತ್ತದೆ. ಈ ವೇಳೆ ಮೂಲಸೌಕರ್ಯದ ಅಂಶವನ್ನು ನಿರ್ಲಕ್ಷಿಸ ಬಾರದು. ಗುಣಮಟ್ಟದ ಶಿಕ್ಷಣ ಎಷ್ಟು ಮುಖ್ಯವೋ ಮೂಲಸೌಕರ್ಯವೂ ಅಷ್ಟೇ ಮುಖ್ಯವಾಗಿದೆ. ಸರ್ಕಾರವೂ ಈ ಬಗ್ಗೆ ತುರ್ತಾಗಿ ಗಮನಹರಿಸಬೇಕಿದೆ’ ಎಂದು ಹೇಳಿದರು.
‘ಸೆಮಿಸ್ಟರ್ ಪರೀಕ್ಷೆಗಳು ಸಮೀಪದಲ್ಲಿದ್ದು, ಮಕ್ಕಳ ಅಧ್ಯಯನಕ್ಕೆ ಯಾವುದೇ ತೊಂದರೆಯಾಗದಂತೆ ಮಕ್ಕಳನ್ನು ಇಲ್ಲಿಂದ ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಬೇಕು’ ಎಂದು ಒತ್ತಾಯಿಸಿದರು.