Sunday, 15th December 2024

ರೈಸಿನಾ ಸಂವಾದದ ಏಳನೇ ಆವೃತ್ತಿ ಉದ್ಘಾಟನೆ ಇಂದು

ನವದೆಹಲಿ: ಭಾರತದ ಪ್ರಮುಖ ಬಹುಪಕ್ಷೀಯ ವಿದೇಶಾಂಗ ನೀತಿ ಮತ್ತು ಭೌಗೋ ಳಿಕ ಅರ್ಥಶಾಸ್ತ್ರ ಸಮ್ಮೇಳನವಾದ ರೈಸಿನಾ ಸಂವಾದದ ಏಳನೇ ಆವೃತ್ತಿಯನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ.

ಏಪ್ರಿಲ್ 25 ರಿಂದ ಏಪ್ರಿಲ್ 27 ರವರೆಗೆ ಮೂರು ದಿನಗಳ ಕಾಲ ನಡೆಯುವ ಸಂವಾದದಲ್ಲಿ ಯುರೋಪಿಯನ್ ಕಮಿಷನ್ ಅಧ್ಯಕ್ಷ ಉರ್ಸುಲಾ ವಾನ್ ಡೆರ್ ಲೇಯೆನ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಅರ್ಜೆಂಟೀನಾ, ಅರ್ಮೇನಿಯಾ, ಗಯಾನಾ, ನೈಜೀರಿಯಾ, ನಾರ್ವೆ, ಲಿಥುವೇನಿಯಾ, ಲಕ್ಸೆಂಬರ್ಗ್, ಮಡಗಾಸ್ಕರ್, ನೆದರ್ಲ್ಯಾಂಡ್ಸ್, ಫಿಲಿಪೈನ್ಸ್, ಪೋಲೆಂಡ್, ಪೋರ್ಚುಗಲ್ ಮತ್ತು ಸ್ಲೊವೇನಿಯಾದ ವಿದೇಶಾಂಗ ಮಂತ್ರಿಗಳು ಮತ್ತು ವಿದೇಶಾಂಗ ಸಚಿವ ಎಸ್. ಜೈಶಂಕರ್ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.