ಜೈಪುರ: ರಾಜಸ್ಥಾನದ ದೌಸಾದ ಕಲಿಖಂಡ್ ಗ್ರಾಮದಲ್ಲಿ ಕೊಳವೆಬಾವಿಗೆ ಬಿದ್ದ 5 ವರ್ಷದ ಬಾಲಕ ಆರ್ಯನ್ ಮೃತಪಟ್ಟಿದ್ದಾನೆ. ನಿರಂತರ 57 ಗಂಟೆಗಳ ಕಾರ್ಯಾಚರಣೆ ಫಲ ನೀಡಲಿಲ್ಲ. ಎನ್ಡಿಆರ್ಎಫ್ ಹಾಗೂ ಉಳಿದ ರಕ್ಷಣಾ ತಂಡಗಳು ಎಷ್ಟೇ ಪ್ರಯತ್ನಪಟ್ಟರೂ ಆರ್ಯನ್ ಬದುಕಿ ಬಂದಿಲ್ಲ. (Rajasthan Borewell tragedy)
ಸೋಮವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಕಾಲಿಖಾಡ್ ಗ್ರಾಮದ ಹೊಲವೊಂದರಲ್ಲಿ ಆಟವಾಡುತ್ತಿದ್ದಾಗ ಆರ್ಯನ್ 150 ಅಡಿ ಆಳದ ಬೋರ್ವೆಲ್ಗೆ ಬಿದ್ದಿದ್ದು, ಆತನ ತಾಯಿ ಆತನನ್ನು ರಕ್ಷಿಸಲು ಪ್ರಯತ್ನಿಸಿದ್ದಳು. ಅದು ಸಾಧ್ಯವಾಗದೇ ಇದ್ದಾಗ ಸ್ಥಳಕ್ಕೆ ಬಂದ ಎನ್ಡಿಆರ್ಎಫ್ ಹಾಗೂ ಎಸ್ಡಿಆರ್ಎಫ್ ತಂಡಗಳು ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದವು.
#WATCH | Rajasthan: 5-year-old boy taken out from a borewell after a 3-day-long rescue operation, in Dausa.
— ANI (@ANI) December 11, 2024
The boy fell into a borewell on 9th December pic.twitter.com/30LKnqlGee
ಬಾಲಕ ಬಿದ್ದಿರುವ ಈ ಕೊಳವೆ ಬಾವಿಯ ಪಕ್ಕದಲ್ಲೇ ಸಮಾನಾಂತರಾವಾಗಿ ಹೊಂಡ ತೆಗೆಯಲು ಜೆಸಿಬಿ ಯಂತ್ರಗಳನ್ನು ಹಾಗು ಟ್ರ್ಯಾಕ್ಟರ್ ಗಳನ್ನು ನಿಯೋಜಿಸಲಾಗಿತ್ತು. ಇನ್ನೊಂದೆಡೆ ಹಗ್ಗ ಮತ್ತು ಇನ್ನಿತರ ಸಲಕರಣೆಗಳ ಮೂಲಕ ಬಾಲಕನನ್ನು ರಕ್ಷಿಸುವ ಕೆಲಸವನ್ನೂ ಪ್ರಾರಂಭಿಸಲಾಗಿತ್ತು. ಆದರೆ ಬಾಲಕನನ್ನು ಮೇಲೆತ್ತಲು ಸಾಧ್ಯವಾಗಿರಲಿಲ್ಲ. ನಂತರ ಪೈಪ್ ಮೂಲಕ ಆಮ್ಲಜನಕವನ್ನು ಸರಬರಾಜು ಮಾಡಲಾಯಿತು ಮತ್ತು ಸಿಸಿಟಿವಿ ಕ್ಯಾಮೆರಾಗಳ ಮೂಲಕ ಬಾಲಕ ಸುರಕ್ಷಿತನಾಗಿದ್ದಾನಾ ಎಂದು ಪರಿಶೀಲನೆ ನಡೆಸಲಾಗಿತ್ತು. ಆದರೆ ಅದ್ಯಾವುದೂ ಈಗ ಫಲ ಕೊಟ್ಟಿಲ್ಲ. ಸಸತ 57 ಗಂಟೆಗಳ ಕಾರ್ಯಾಚರಣೆಯ ಬಳಿಕವೂ ಆರ್ಯನ್ ಮೇಲೆ ಬರಲೇ ಇಲ್ಲ.
ಈ ಬಗ್ಗೆ ಮಾತನಾಡಿದ್ದ ಎನ್ಡಿಆರ್ಎಫ್ ಕಾರ್ಯಾಚರಣೆಗೆ ಹಲವು ಸವಾಲುಗಳಿವೆ ನೀರಿನ ಮಟ್ಟ ಸುಮಾರು 160 ಅಡಿ ಎಂದು ಅಂದಾಜಿಸಲಾಗಿದ್ದು, ಕೆಳಗಿನ ಉಷ್ಣತೆಗೆ ಕ್ಯಾಮರಾದಲ್ಲಿ ಬಾಲಕನ ಚಲನವಲನಗಳನ್ನು ಸೆರೆಹಿಡಿಯುವಲ್ಲಿನ ತೊಂದರೆ ಉಂಟಾಗುತ್ತಿದೆ ಎಂದು ಹೇಳಿದ್ದರು.
Dausa, Rajasthan: The rescue operation to save five-year-old Aryan, who fell into a 150-feet deep borewell is ongoing. A tunnel is dugged 155 feet deep and 4 feet wide to reach him, with iron pipes used for casing pic.twitter.com/UmAcopElDm
— IANS (@ians_india) December 11, 2024
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಬಾಲಕನನ್ನು ಹೊರತೆಗೆದ ನಂತರ, ತಕ್ಷಣವೇ ಆಂಬ್ಯುಲೆನ್ಸ್ನಲ್ಲಿ ಆಸ್ಪತ್ರೆಗೆ ರವಾನಿಸಲಾಗಿತಾದರೂ ಅದ್ಯಾಗಿಯೂ ಬಾಲಕ ಬದುಕುಳಿಯಲಿಲ್ಲ. ಸೆಪ್ಟೆಂಬರ್ನಲ್ಲಿ, ದೌಸಾದ ಬಂಡಿಕುಯಿ ಪ್ರದೇಶದಲ್ಲಿ 35 ಅಡಿ ತೆರೆದ ಕೊಳವೆ ಬಾವಿಗೆ ಎರಡು ಬಾಲಕಿ ಒಬ್ಬಳು ಬಿದ್ದಿದ್ದಳು. ನಂತರ 18 ಗಂಟೆಗಳ ರಕ್ಷಣಾ ಕಾರ್ಯಾಚರಣೆಯ ನಂತರ ಆಕೆಯನ್ನು ರಕ್ಷಿಸಲಾಗಿತ್ತು.
ಈ ಸುದ್ದಿಯನ್ನೂ ಓದಿ : Fact Check: ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ವ್ಯವಸ್ಥೆ ಬೇಕೆಂದು ಹೇಳಿದ್ದರೆ ಮೋದಿ ? ವೈರಲ್ ವಿಡಿಯೊದ ಅಸಲಿಯತ್ತೇನು?