Thursday, 12th December 2024

ರಾಜಸ್ಥಾನ ಚುನಾವಣೆ: 21 ಅಭ್ಯರ್ಥಿಗಳ ಎಎಪಿ ಎರಡನೇ ಪಟ್ಟಿ ಬಿಡುಗಡೆ

ವದೆಹಲಿ: ರಾಜಸ್ಥಾನ ವಿಧಾನಸಭೆ ಚುನಾವಣೆಗೆ 21 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಶನಿವಾರ ಎಎಪಿ ಬಿಡುಗಡೆ ಮಾಡಿದೆ.

ಬಿಕಾನೇರ್ ಪಶ್ಚಿಮ ವಿಧಾನಸಭೆ ಕ್ಷೇತ್ರದಿಂದ ಮನೀಶ್ ಶರ್ಮಾ, ಸಿವಿಲ್ ಲೈನ್ಸ್ ಕ್ಷೇತ್ರದಿಂದ ಅರ್ಚಿತ್ ಗುಪ್ತಾ, ಜೋಧ್‌ಪುರ ಕ್ಷೇತ್ರದಿಂದ ರೋಹಿತ್ ಜೋಶ್, ಮಾರ್ವಾರ್ ಜಂಕ್ಷನ್ ಕ್ಷೇತ್ರದಿಂದ ನರ್ಪತ್ ಸಿಂಗ್ ಸ್ಪರ್ಧಿಸಲಿದ್ದಾರೆ.

ಅ.26 ರಂದು ಎಎಪಿ ತನ್ನ 23 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. 200 ಸದಸ್ಯರ ರಾಜಸ್ಥಾನ ವಿಧಾನಸಭೆಗೆ ನವೆಂಬರ್ 25ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 3ರಂದು ಮತ ಎಣಿಕೆ ನಡೆಯಲಿದೆ.

ಜೈಪುರದಲ್ಲಿನ ಮಾಳವೀಯ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಎರಡು ಬಾರಿ ಪರಾಭವಗೊಂಡಿದ್ದ ಅರ್ಚನಾ ಶರ್ಮಾ ಅವರಿಗೆ ಟಿಕೆಟ್ ನೀಡಿದೆ. ಟಿಕೆಟ್‌ ಹಂಚಿಕೆ ವಿರೋಧಿಸಿ ಕಾಂಗ್ರೆಸ್ ನಾಯಕ ಮತ್ತು ವಿಪ್ರ ಕಲ್ಯಾಣ ಮಂಡಳಿಯ ಅಧ್ಯಕ್ಷ ಮಹೇಶ್‌ ಶರ್ಮಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಶಾಸಕ ಗಣೇಶ್‌ ಘೋಗ್ರ ಅವರಿಗೆ ಟಿಕೆಟ್‌ ನೀಡಿದ್ದು ಹಲವರ ಅಸಮಾಧಾನಕ್ಕೆ ಕಾರಣವಾಗಿದೆ.