Sunday, 15th December 2024

ರಾಜಸ್ಥಾನ ಚುನಾವಣೆ: ಬಿಜೆಪಿಯ ನಾಲ್ಕನೇ ಪಟ್ಟಿ ಬಿಡುಗಡೆ

ರಾಜಸ್ಥಾನ: ವಿಧಾನಸಭೆ ಚುನಾವಣೆಗೆ ರಾಜಸ್ಥಾನದಲ್ಲಿ ಬಿಜೆಪಿ ತನ್ನ ಅಭ್ಯರ್ಥಿಗಳ ನಾಲ್ಕನೇ ಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡಿದೆ.

ಬಿಜೆಪಿ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ರಾಮ್ ನಿವಾಸ್ ಮೀನಾ ಹಾಗೂ ಸ್ವರೂಪ್ ಸಿಂಗ್ ಖಾರಾ ಇಬ್ಬರ ಹೆಸರನ್ನು ಮಾತ್ರ ಬಿಡುಗಡೆ ಮಾಡಿದ್ದು , ಅದರಲ್ಲಿ ರಾಮ್ ನಿವಾಸ್ ಮೀನಾ ಅವರು ತೋಡಭೀಮ್ (ಎಸ್‌ಸಿ) ಸ್ಥಾನದಿಂದ ಕಣಕ್ಕಿಳಿದಿದ್ದಾರೆ.

ಸ್ವರೂಪ್ ಸಿಂಗ್ ಖಾರಾ ಅವರಿಗೆ ಶಿವ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ.

ಇದಕ್ಕೂ ಮುನ್ನ ಬಿಜೆಪಿ ಮೂರು ಪಟ್ಟಿಗಳನ್ನು ಬಿಡುಗಡೆ ಮಾಡಿವ ಮೂಲಕ 182 ಅಭ್ಯರ್ಥಿಗಳ ಹೆಸರನ್ನು ಬಹಿರಂಗ ಪಡಿಸಿತ್ತು, ಇದೀಗ ನಾಲ್ಕನೇ ಪಟ್ಟಿ ಬಿಡುಗಡೆ ಮಾಡಿದ್ದೂ ಇದರಲ್ಲಿ ಇಬ್ಬರ ಹೆಸರನ್ನು ಬಹಿರಂಗಪಡಿಸುವ ಮೂಲಕ ಒಟ್ಟು 184 ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರನ್ನು ಬಿಡುಗಡೆ ಮಾಡಿದಂತಾಗಿದೆ.

ಇನ್ನು ಬಿಜೆಪಿ ಕೇವಲ 16 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಬೇಕಾಗಿದೆ.

ರಾಜಸ್ಥಾನದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಮರಳಲು ಹೆಚ್ಚಿನ ತಯಾರಿ ನಡೆಸುತ್ತಿದೆ. ಪೃಥ್ವಿರಾಜ್ ಮೀನಾ ತೋಡಭೀಮ್ ಕ್ಷೇತ್ರದ ಶಾಸಕರಾಗಿದ್ದಾರೆ. ಇಲ್ಲಿ 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಪೃಥ್ವಿರಾಜ್ ಮೀನಾ ತೋಡಭೀಮ್‌ ನಿಂದ ಗೆದ್ದಿದ್ದರು. ಪೃಥ್ವಿರಾಜ್ 1,07,691 ಮತಗಳಿಂದ ಗೆಲುವು ಸಾಧಿಸಿದ್ದಾರೆ.

ಅದರಂತೆ ರಾಜಸ್ಥಾನದ ಪಶ್ಚಿಮ ವಲಯದ ಲಾಲ್ ಶಿವ ವಿಧಾನಸಭಾ ಸ್ಥಾನಕ್ಕೆ ಚುನಾವಣಾ ಸ್ಪರ್ಧೆಯು ಬಹುತೇಕ ಪೈಪೋಟಿ ಯಿಂದ ಕೂಡಿದೆ. ಒಂದು ಕಾಲದಲ್ಲಿ ಅಭ್ಯರ್ಥಿಗಳೂ ಸಿಗದ ಕ್ಷೇತ್ರವಿದು. ಜನರನ್ನು ಬಲವಂತವಾಗಿ ಮನೆಯಿಂದ ಕರೆದೊಯ್ದು ದಾಖಲಾತಿ ಮಾಡಲಾಯಿತು. ಆದರೆ, ಈಗ ಈ ಸ್ಥಾನ ರಾಜಕೀಯವಾಗಿ ಮಹತ್ವ ಪಡೆದಿದೆ. 30 ವರ್ಷಗಳಿಂದ ಇಲ್ಲಿ ಪಕ್ಷ ಪುನರಾವರ್ತನೆಯಾಗಿಲ್ಲ.

1993ರಿಂದ ಇಲ್ಲಿಗೆ ಕಾಂಗ್ರೆಸ್‌ ಒಮ್ಮೆ, ಬಿಜೆಪಿ ಒಮ್ಮೆ ಅಧಿಕಾರಕ್ಕೆ ಬಂದಿವೆ.