ಜೈಪುರ: ರಜಪೂತ ಸಮುದಾಯದ ನಾಯಕ ಸುಖದೇವ್ ಸಿಂಗ್ ಗೋಗಮೇದಿ ಹತ್ಯೆಯ ಹಿನ್ನೆಲೆಯಲ್ಲಿ ಬುಧವಾರ ರಾಜಸ್ಥಾನ ಬಂದ್ ಗೆ ಕರೆ ನೀಡಲಾಗಿದೆ. ರಾಷ್ಟ್ರೀಯ ರಜಪೂತ ಕರ್ಣಿ ಸೇನೆಯ ಮಖ್ಯಸ್ಥರಾಗಿದ್ದ ಸುಖದೇವ್ ಸಿಂಗ್ ರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದಿದ್ದರು.
ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಸದಸ್ಯನಾದ ರೋಹಿತ್ ಗೋದರಾ ಹತ್ಯೆಯ ಹೊಣೆಯನ್ನು ಹೊತ್ತಿದ್ದು, ಈ ಬಗ್ಗೆ ಫೇಸ್ ಬುಕ್ ನಲ್ಲಿ ಫೋಸ್ಟ್ ಸಹ ಹಂಚಿ ಕೊಂಡಿದ್ದ.
ರಜಪೂತ ನಾಯಕನ ಹತ್ಯೆಯನ್ನು ಖಂಡಿಸಿ ಇಂದು ಸಮುದಾಯದ ಮುಖಂಡರು ರಾಜಸ್ಥಾನ ಬಂದ್ ಗೆ ಕರೆ ನೀಡಿದ್ದು, ಅಲ್ಲಲ್ಲಿ ಪ್ರತಿಭಟನೆ ಮತ್ತು ರಸ್ತೆತಡೆಗಳೂ ಸಹ ನಡೆಯುತ್ತಿವೆ. ಶಿಪ್ರಾ ಆಸ್ಪತ್ರೆಯ ಬಳಿ ರಸ್ತೆ ನಡೆಸಿರುವ ಪ್ರತಿಭಟನಾಕಾರರು ಹಂತಕರನ್ನು ಶೀಘ್ರವಾಗಿ ಬಂಧಿಸಲು ಒತ್ತಾಯಿಸಿದ್ದಾರೆ.
ಹಂತಕರು ಅವಿತುಕೊಂಡಿರಬಹುದಾದ ಜಾಗಗಳಲ್ಲಿ ಶೋಧ ನಡೆಯುತ್ತಿದ್ದು ಶೀಘ್ರದಲ್ಲೇ ಅವರನ್ನು ಬಂಧಿಸುವುದಾಗಿ ರಾಜಸ್ಥಾನ ಪೊಲೀಸ್ ವರಿಷ್ಠ ಉಮೇಶ್ ಮಿಶ್ರಾ ಹೇಳಿದ್ದಾರೆ.