ರಾಜಸ್ಥಾನ: ನಗರದ ಕೋಟದಲ್ಲಿ ಕಾರಿನಲ್ಲೇ ಮಗುವನ್ನು ಮರೆತು ದಂಪತಿ ಮದುವೆಗೆ ತೆರಳಿದ್ದು ಮಗು ನರಳಿ ನರಳಿ ಕಾರಿನಲ್ಲೆ ಪ್ರಾಣ ಬಿಟ್ಟಿರುವ ದಾರುಣ ಘಟನೆ ನಡೆದಿದೆ.
ಮದುವೆ ಮನೆಗೆ ತೆರಳುತ್ತಿದ್ದಂತೆ ಸಂಬಂಧಿಕರು ಮಾತನಾಡಿಸಿದ್ದಾರೆ.
ಈ ವೇಳೆ ಪ್ರದೀಪ್(ಪತಿ) ಪಾರ್ಕಿಂಗ್ ಸ್ಥಳದಲ್ಲಿ ಕಾರು ನಿಲ್ಲಿಸಿ ತನ್ನ ಪತ್ನಿ ಮತ್ತು ಹಿರಿಯ ಮಗಳು ಕಾರಿನಿಂದ ಇಳಿದು ಮದುವೆಗೆ ತೆರಳಿದ್ದಾರೆ. ಆದರೆ ಇತ್ತ ಹಿಂದಿನ ಸೀಟ್‌ನಲ್ಲಿ ಮಲಗಿದ್ದ 3 ವರ್ಷದ ಕಂದಮ್ಮನ ಅರಿವೇ ಇಲ್ಲದೆ ಸಮಾರಂಭಕ್ಕೆ ತೆರಳಿ ಮೂವರು ಸುಮಾರು 2 ಗಂಟೆಗಳ ನಂತರ ಮಗುವಿನ ನೆನೆಪಾಗಿದೆ. ಇಡೀ ಮದುವೆ ಮನೆಯ ಶೋಧ ನಡೆಸಿ ನಂತರ ತಕ್ಷಣ ಕಾರಿನ ಬಳಿ ಬಂದಾಗ ಮಗು ಗೌರವಿಕಾ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದಳು.
ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ ವೈದ್ಯರು ಮೃತಪಟ್ಟಿದ್ದಾಳೆ ಎಂದು ಘೋಷಣೆ ಮಾಡಿದ್ದಾರೆ.
ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.