Sunday, 15th December 2024

ಹಿಮಾಚಲಪ್ರದೇಶದ ರಾಜ್ಯಪಾಲರಾಗಿ ಮಾಜಿ ಸಭಾಪತಿ ಅರ್ಲೇಕರ್ ನೇಮಕ

ಪಣಜಿ : ಗೋವಾ ವಿಧಾನಸಭೆಯ ಮಾಜಿ ಸಭಾಪತಿ, ಮಾಜಿ ಸಚಿವ ರಾಜೇಂದ್ರ ಅರ್ಲೇಕರ್ ರವರು ಹಿಮಾಚಲಪ್ರದೇಶದ ರಾಜ್ಯಪಾಲರಾಗಿ ನಿಯುಕ್ತಿಯಾಗಿ ದ್ದಾರೆ.

ಅರ್ಲೇಕರ್ ರವರು ಮೂಲತಃ ಸಂಘ ಪರಿವಾರದವರಾಗಿದ್ದಾರೆ. ವಾಸ್ಕೊ ಮತ್ತು ಪೆಡ್ನೆ ಮತಕ್ಷೇತ್ರದಿಂದ ಚುನಾಯಿತರಾಗಿ ಗೋವಾ ವಿಧಾನಸಭೆ ಪ್ರವೇಶಿಸಿ ದ್ದರು. ಗೋವಾ ವಿಧಾನಸಭೆಯ ಸಭಾಪತಿಗಳಾಗಿ ಮತ್ತು ಪಂಚಾಯತ ಮಂತ್ರಿಯಾಗಿಯೂ ಕೆಲಸ ನಿರ್ವಹಿಸಿದ್ದಾರೆ.

ಗೋವಾದ ಮಾಜಿ ಸಭಾಪತಿ ರಾಜೇಂದ್ರ ಅರ್ಲೇಕರ್ ರವರು ಹಿಮಾಚಲಪ್ರದೇಶದ ಸಭಾಪತಿಗಳಾಗಿ ನಿಯುಕ್ತಿಗೊಂಡಿರುವುದಕ್ಕೆ ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ್ ಅಭಿನಂದನೆ ಸಲ್ಲಿಸಿದ್ದು, ದೊಡ್ಡ ಹುದ್ದೆಗೆ ಆಯ್ಕೆಯಾಗಿರುವ ಗೋವಾದ ಮೊದಲ ವ್ಯಕ್ತಿ ಎಂದು ಬಣ್ಣಿಸಿದ್ದಾರೆ.