Thursday, 19th September 2024

ರಾಜೌರಿಯಲ್ಲಿ ಸೇನಾ ಆಂಬ್ಯುಲೆನ್ಸ್​​ ಅಪಘಾತ: ಇಬ್ಬರು ಯೋಧರ ಸಾವು

ರಾಜೌರಿ: ಜಮ್ಮು-ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ಗಡಿ ನಿಯಂತ್ರಣಾ ರೇಖೆ ಬಳಿಯ ಕೇರಿ ಸೆಕ್ಟರ್​ನಲ್ಲಿ ಸೇನಾ ಆಂಬ್ಯುಲೆನ್ಸ್​​ವೊಂದು ಅಪಘಾತಕ್ಕೀಡಾಗಿ, ಇಬ್ಬರು ಯೋಧರು ಮೃತಪಟ್ಟಿದ್ದಾರೆ.

ಮೂವರು ಯೋಧರು ಗಾಯಗೊಂಡಿದ್ದಾರೆ. ರುವಿನ ಬಳಿ ಚಾಲಕ ನಿಯಂತ್ರಣ ತಪ್ಪಿದ ಆಂಬ್ಯುಲೆನ್ಸ್​ ಕಂದಕಕ್ಕೆ ಉರುಳಿ ಬಿದ್ದಿದೆ. ಮೃತ ಯೋಧರ ಶವವನ್ನು ಕಂದಕದಿಂದ ಹೊರ ತೆಗೆಯಲಾಗಿದೆ. ಗಾಯಗೊಂಡವರನ್ನು ಮೇಲೆತ್ತಿ, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಜಮ್ಮು-ಕಾಶ್ಮೀರದಲ್ಲಿ ಹಲವು ಕಡಿದಾದ ರಸ್ತೆಗಳಿದ್ದು, ಈ ಹಿಂದೆಯೂ ಹಲವು ಸೇನಾ ವಾಹನಗಳು ಹೀಗೆ ಉರುಳಿ ಕಂದಕಕ್ಕೆ ಬಿದ್ದ ಉದಾಹರಣೆಗಳಿವೆ.

ಉತ್ತರ ಸಿಕ್ಕಿಂನಲ್ಲಿ ಕಳೆದ ವರ್ಷ ಡಿಸೆಂಬರ್​ನಲ್ಲಿ ದೊಡ್ಡ ಮಟ್ಟದ ಅಪಘಾತವಾಗಿತ್ತು. ಚಾಟೆನ್​​ನಿಂದ ತಂಗು ಕಡೆಗೆ ತೆರಳುತ್ತಿದ್ದ ಸೇನಾ ವಾಹನ ಆಳವಾದ ಇಳಿಜಾರಿನಲ್ಲಿ ಆಯತಪ್ಪಿ, ಕಂದಕಕ್ಕೆ ಬಿದ್ದು 16 ಯೋಧರು ಮತ್ತು ನಾಲ್ಕು ಮಂದಿ ಸಾರ್ವಜನಿಕರು ಮೃತಪಟ್ಟಿದ್ದರು