Saturday, 14th December 2024

ಎನ್ಕೌಂಟರಿನಲ್ಲಿ ಹುತಾತ್ಮ ಐವರು ಯೋಧರಿಗೆ ಶ್ರದ್ಧಾಂಜಲಿ

ರಜೌರಿ/ಜಮ್ಮು: ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಇತ್ತೀಚೆಗೆ ಉಗ್ರರೊಂದಿಗೆ ನಡೆದ ಎನ್ಕೌಂಟರಿನಲ್ಲಿ ಹುತಾತ್ಮ ರಾದ ಐವರು ವೀರ ಯೋಧರಿಗೆ ಭಾರತೀಯ ಸೇನಾಪಡೆ ಹಾಗೂ ಪೊಲೀಸರು ಶುಕ್ರವಾರ ಶ್ರದ್ಧಾಂಜಲಿ ಸಲ್ಲಿಸಿದರು.
ಬಾಜಿಮಲ್ ಪ್ರದೇಶದಲ್ಲಿ ಭದ್ರತಾ ಪಡೆಗಳೊಂದಿಗೆ 36 ಗಂಟೆಗಳ ಕಾಲ ನಡೆದ ಎನ್ಕೌಂಟರಿನಲ್ಲಿ ಅಫ್ಘಾನಿಸ್ತಾನದಲ್ಲಿ ತರಬೇತಿ ಪಡೆದ ಲಷ್ಕರ್-ಎ-ತೈಬಾ (ಎಲ್ಇಟಿ) ಕಮಾಂಡರ್ ಸೇರಿದಂತೆ ಇಬ್ಬರು ಭಯೋತ್ಪಾದಕರು ಹತರಾಗಿದ್ದಾರೆ. ಕಾರ್ಯಾಚರಣೆ ವೇಳೆ ಇಬ್ಬರು ಕ್ಯಾಪ್ಟನ್‌ಗಳು ಸೇರಿದಂತೆ ಐವರು ಭಾರತೀಯ ಸೈನಿಕರು ಹುತಾತ್ಮರಾಗಿದ್ದರು. ಎನ್ಕೌಂಟರಿನಲ್ಲಿ ಹುತಾತ್ಮರಾದ ಸೇನಾ ಸಿಬ್ಬಂದಿಗೆ ಆರ್ಮಿ ಜನರಲ್ ಹಾಸ್ಪಿಟಲ್ ಮತ್ತು ಸೇನೆಯು ಪುಷ್ಪಾರ್ಪಣೆ ಕಾರ್ಯಕ್ರಮ ಆಯೋಜಿಸಿತ್ತು. ಇದರಲ್ಲಿ ‘ಜನರಲ್ ಆಫೀಸರ್ ಕಮಾಂಡಿಂಗ್ ರೋಮಿಯೋ ಫೋರ್ಸ್’ ಮತ್ತು ಇತರೆ ಪೊಲೀಸ್ ಅಧಿಕಾರಿಗಳು ಪುಷ್ಪಗುಚ್ಛಗಳನ್ನಿಡುವ ಮೂಲಕ ಗೌರವ ವಂದನೆ ಸಲ್ಲಿಸಿದರು. ಪೂಂಚ್ ನಿವಾಸಿ ಹಾವ್ ಅಬ್ದುಲ್ ಮಜೀದ್ ಅವರ ಪುಷ್ಪಾರ್ಚನೆ ಕಾರ್ಯಕ್ರಮ ಪೂಂಚ್ನಲ್ಲಿ ನೆರವೇರಿತು.