Sunday, 15th December 2024

ರಜೌರಿ: ಕಮರಿಗೆ ಉರುಳಿ ಬಿದ್ದ ಮಿನಿ ಬಸ್, ನಾಲ್ವರ ಸಾವು

ಜೌರಿ/ಜಮ್ಮು: ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಮಿನಿ ಬಸ್ ರಸ್ತೆಯಿಂದ ಸ್ಕಿಡ್ ಆಗಿ ಆಳವಾದ ಕಮರಿಗೆ ಉರುಳಿ ಬಿದ್ದ ಪರಿಣಾಮ ನಾಲ್ವರು ಸಾವನ್ನಪ್ಪಿ, ಎಂಟು ಮಂದಿ ಗಂಭೀರ ಗಾಯಗೊಂಡಿದ್ದಾರೆ.

ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಮಿನಿಬಸ್‍ನಲ್ಲಿ ತೆರಳುತ್ತಿದ್ದಾಗ ಪೂಂಚ್‍ನಿಂದ ಭಂಗೈ ಗ್ರಾವದ ಥಾನಮಂಡಿ ಉಪವಿಭಾಗ ದಲ್ಲಿ ಅಪಘಾತ ಸಂಭವಿಸಿದೆ. ಮೃತರನ್ನು ಭಂಗೈ ನಿವಾಸಿಗಳಾದ ಶಮೀಮ್ ಅಖ್ತರ್ (55), ರುಬಿನಾ ಕೌಸರ್ (35), ಜರೀನಾ ಬೇಗಂ ಮತ್ತು ಮೊಹಮ್ಮದ್ ಯೂನಿಸ್ (38) ಎಂದು ಗುರುತಿಸಲಾಗಿದೆ.

ಒಟ್ಟು ಹನ್ನೆರಡು ಪ್ರಯಾಣಿಕರು ವಾಹನದಲ್ಲಿ ಪ್ರಯಾಣಿಸುತ್ತಿದ್ದರು ಅಪಘಾತ ಸಂಭ ವಿಸಿದಾಗ ಮೊದಲು ಸ್ಥಳೀಯರು ನಂತರ ಪೊಲೀಸರು ರಕ್ಷಣಾ ಕಾರ್ಯಾಚರಣೆ ಕೈಗೊಂಡು ಹಲವರ ಜೀವ ಉಳಿಸಿದ್ದಾರೆ.

ಗಾಯಾಳುಗಳನ್ನು ರಜೌರಿಯ ಜಿಎಂಸಿ ಅಸೋಸಿಯೇಟೆಡ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಉಪವಿಭಾಗೀಯ ಪೊಲೀಸ್ ಅಧಿಕಾರಿ ಥಾನಮಂಡಿ ಇಮ್ತಿಯಾಜ್ ಅಹ್ಮದ್ ತಿಳಿಸಿದ್ದಾರೆ.