Friday, 22nd November 2024

ಬೆಂಗಳೂರು ’ಮೆಟ್ರೋ’ದಲ್ಲಿ ಕನ್ನಡ ಕಡ್ಡಾಯ: ರಾಜ್ಯಸಭೆಯಲ್ಲಿ ಜಿ.ಸಿ.ಚಂದ್ರಶೇಖರ್ ಪ್ರಸ್ತಾಪ

ನವದೆಹಲಿ: ಕರ್ನಾಟಕ ರಾಜಧಾನಿ ಬೆಂಗಳೂರು ನಗರದಲ್ಲಿ ಸಾರಿಗೆ ಕ್ಷೇತ್ರದಳ ಪೈಕಿ ಪ್ರಮುಖವಾಗಿರುವ ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಕನ್ನಡ ಭಾಷೆಯ ಬಳಕೆ ಕಡ್ಡಾಯ ಮಾಡುವ ಕುರಿತಂತೆ ರಾಜ್ಯಸಭೆಯಲ್ಲಿ ಜಿ.ಸಿ.ಚಂದ್ರಶೇಖರ್ ಪ್ರಸ್ತಾಪ ಮಾಡಿದರು.

ತ್ರಿಭಾಷಾ ಸೂತ್ರದಂತೆ ಕಡ್ಡಾಯ ಮಾಡುವಂತೆ ರಾಜ್ಯಸಭೆಯಲ್ಲಿ ಕಾಂಗ್ರೆಸ್ ರಾಜ್ಯ ಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್‌ ಆಗ್ರಹ ಪಡಿಸಿದರು. ಇದಕ್ಕೆ ಉಪ ರಾಷ್ಟ್ರಪತಿ ಹಾಗೂ ರಾಜ್ಯಸಭೆಯ ಸ್ಪೀಕರ್ ಕೂಡ ಆಗಿರುವ  ವೆಂಕಯ್ಯ ನಾಯ್ಡು ಒಪ್ಪಿಗೆ ಸೂಚಿಸಿ ದರು.

ತ್ರಿಭಾಷಾ ಸೂತ್ರದಂತೆ ಕನ್ನಡ ಕಡ್ಡಾಯ ಮಾಡಿ. ಬೇರೆ ರಾಜ್ಯಗಳಲ್ಲೂ ಅಯಾ ಭಾಷೆಗಳಲ್ಲೇ ಇರಲಿ ಎಂದು ಇದೇ ವೇಳೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಸಂಬಂಧಿಸಿದ ಸಚಿವರಿಗೆ ಸೂಚನೆ ನೀಡಿದರು.