Monday, 25th November 2024

Ram Gopal Varma: ಚಂದ್ರಬಾಬು ನಾಯ್ಡು ಅವರ ತಿರುಚಿದ ಫೊಟೋ ಪೋಸ್ಟ್; ರಾಮ್ ಗೋಪಾಲ್ ವರ್ಮಾ ವಿರುದ್ಧ‍ FIR

Ram Gopal Varma

ಆಂಧ್ರಪ್ರದೇಶ: ವಿವಾದಾತ್ಮಕ ವಿಚಾರಗಳಿಂದಲೇ ಹೆಚ್ಚು ಸುದ್ದಿಯಲ್ಲಿರುವ ಚಿತ್ರ ನಿರ್ದೇಶಕ (film director) ರಾಮ್ ಗೋಪಾಲ್ ವರ್ಮಾ (Ram Gopal Varma) ವಿರುದ್ದದ ಈಗ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು (Chief Minister Chandrababu Naidu) ಅವರ ‘ಮಾರ್ಫ್ಡ್’ ಚಿತ್ರಗಳನ್ನು(ತಿರುಚಿರುವ ಫೊಟೋ) ಪೋಸ್ಟ್ ಮಾಡಿದ್ದಕ್ಕಾಗಿ ಕೇಸು ದಾಖಲಿಸಲಾಗಿದೆ.

ಚಂದ್ರಬಾಬು ನಾಯ್ಡು, ಅವರ ಕುಟುಂಬ ಸದಸ್ಯರು ಮತ್ತು ಪವನ್ ಕಲ್ಯಾಣ್ ಅವರ ಚಿತ್ರಗಳನ್ನು ಮಾರ್ಫಿಂಗ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಆರೋಪದ ಮೇಲೆ ಆಂಧ್ರಪ್ರದೇಶ ಪೊಲೀಸರು ರಾಮ್ ಗೋಪಾಲ್ ವರ್ಮಾ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಚಂದ್ರಬಾಬು ನಾಯ್ಡು, ಅವರ ಪುತ್ರ ನಾರಾ ಲೋಕೇಶ್ ಮತ್ತು ಜನಸೇನಾ ಪಕ್ಷದ ಮುಖ್ಯಸ್ಥ ಮತ್ತು ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಸೇರಿದಂತೆ ತೆಲುಗು ದೇಶಂ ಪಕ್ಷದ (ಟಿಡಿಪಿ) ನಾಯಕರ ಮಾರ್ಫ್ ಮಾಡಿದ ವಿವಾದಿತ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾಗಿತ್ತು.

ವರ್ಮಾ ಅವರು ತಮ್ಮ ಮಗ ಲೋಕೇಶ್, ಸೊಸೆ ಬ್ರಹ್ಮಿಣಿ ಸೇರಿದಂತೆ ನಾಯ್ಡು ಮತ್ತು ಅವರ ಕುಟುಂಬಕ್ಕೆ ಅವಮಾನಕಾರವಾಗುವಂತೆ ಈ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ ಎಂದು ಟಿಡಿಪಿ ಮುಖಂಡ ರಾಮಲಿಂಗಂ ಅವರು ನೀಡಿದ ದೂರಿನ ಮೇರೆಗೆ ಪ್ರಕಾಶಂ ಜಿಲ್ಲೆಯ ಮಡ್ಡಿಪಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅವಹೇಳನಕಾರಿ ಪೋಸ್ಟ್‌ಗಳು ಮುಖ್ಯಮಂತ್ರಿ, ಅವರ ಕುಟುಂಬ ಸದಸ್ಯರ ಸ್ಥಾನಮಾನವನ್ನು ಹಾಳುಮಾಡುತ್ತವೆ ಎಂದು ರಾಮಲಿಂಗಂ ದೂರಿನಲ್ಲಿ ಆರೋಪಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್‌ಗಳನ್ನು ಅಪ್‌ಲೋಡ್ ಮಾಡಿದ ಆರೋಪದ ಮೇಲೆ ಚಿತ್ರ ನಿರ್ಮಾಪಕರ ವಿರುದ್ಧ ಭಾನುವಾರ ರಾತ್ರಿ ದೂರು ದಾಖಲಾಗಿದೆ. ಈ ಕುರಿತು ಮಾಹಿತಿ ನೀಡಿರುವ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಎ.ಆರ್. ದಾಮೋದರ್, ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪ್ರಸ್ತುತ ಮುಖ್ಯಮಂತ್ರಿ, ಅವರ ಕುಟುಂಬ ಸದಸ್ಯರು ಮತ್ತು ಉಪಮುಖ್ಯಮಂತ್ರಿ ಅವರ ಭಾವಚಿತ್ರಗಳನ್ನು ಆಕ್ಷೇಪಾರ್ಹ ರೀತಿಯಲ್ಲಿ ಮಾರ್ಫಿಂಗ್ ಮಾಡಿದ್ದಕ್ಕಾಗಿ ನಾವು ರಾಮ್ ಗೋಪಾಲ್ ವರ್ಮಾ ವಿರುದ್ಧ ಪ್ರಕಾಶಂ ಜಿಲ್ಲೆಯ ಮಡ್ಡಿಪಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೇವೆ ಎಂದು ತಿಳಿಸಿದರು.

Shah Rukh Khan death threat: ಬಾಲಿವುಡ್‌ ಬಾದ್‌ಷಾಗೆ ಬೆದರಿಕೆ ಪ್ರಕರಣ- ಆರೋಪಿ ಹೆಡೆಮುರಿ ಕಟ್ಟಿದ ಪೊಲೀಸರು

ವೈಎಸ್ಆರ್ ಕಾಂಗ್ರೆಸ್ ಪಕ್ಷದೊಂದಿಗಿನ ನಿಕಟ ಸಂಬಂಧ ಹೊಂದಿರುವ ವರ್ಮಾ ಅವರು ಹೆಚ್ಚಾಗಿ ನಾಯ್ಡು ಅವರ ವಿರುದ್ಧ ತಮ್ಮ ಸಿನಿಮಾಗಳ ಮೂಲಕ ಟೀಕೆಗಳನ್ನು ಮಾಡುತ್ತಲೇ ಇರುತ್ತಾರೆ.