Sunday, 15th December 2024

5 ಲಕ್ಷ ದೇವಾಲಯಗಳಲ್ಲಿ ಏಕಕಾಲದಲ್ಲಿ ರಾಮ ಮಂದಿರದ ಉದ್ಘಾಟನೆ ಪ್ರಸಾರ

ಯೋಧ್ಯೆ: ಶ್ರೀರಾಮ ಮಂದಿರದ ಉದ್ಘಾಟನಾ ಸಮಾರಂಭದ ನೇರ ಪ್ರಸಾರವು ದೇಶದ 5 ಲಕ್ಷ ದೇವಾಲಯಗಳಲ್ಲಿ ಏಕಕಾಲದಲ್ಲಿ ಪ್ರಸಾರವಾಗಲಿದೆ.

ಇದರಲ್ಲಿ ಪ್ರತಿಯೊಂದು ದೇವಸ್ಥಾನವೂ ಒಳಗೊಂಡಿರುತ್ತದೆ. ಹಿಂದೂ ಸಮುದಾಯಗಳನ್ನು ಒಟ್ಟಿಗೆ ಸೇರಿಸುವುದು ಮತ್ತು ಶ್ರೀರಾಮ ಮಂದಿರದ ಉದ್ಘಾಟನೆಯ ಮೂಲಕ ಜಾತಿ ಸಿದ್ಧಾಂತವನ್ನು ಕೊನೆಗೊಳಿಸಲು ಪ್ರಯತ್ನಿಸುವುದು ವಿಶ್ವ ಹಿಂದೂ ಪರಿಷತ್ತಿನ ಉದ್ದೇಶವಾಗಿದೆ.

ಇದಕ್ಕೂ ಮುನ್ನ ವಿಶ್ವ ಹಿಂದೂ ಪರಿಷತ್ತು ಶ್ರೀ ರಾಮ ಪಾದುಕಾ ಪೂಜೆ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮಕ್ಕೆ ದೇಶದ ಪ್ರತಿ ಯೊಂದು ಸಮಾಜ ಮತ್ತು ವಿವಿಧ ಜಾತಿಗಳ ಜನರು ಜೋಡಣೆಯಾಗಿದ್ದರು. ಅಲ್ಲದೆ ಕೆಲ ಸಮಯದ ಹಿಂದೆ ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ಸಮರ್ಪಣಾ ನಿಧಿ ಅಭಿಯಾನ ಆರಂಭಿಸಲಾಗಿತ್ತು. ಈ ಕಾರ್ಯಕ್ರಮದ ಮೂಲಕ ದೇಶದ ಕೋಟ್ಯಾಂತರ ಹಿಂದೂ ಕುಟುಂಬಗಳು ಒಂದುಗೂಡಿದ್ದವು.

ಭಗವಾನ್ ಶ್ರೀ ರಾಮನ ವಿಷಯ ಬಂದಾಗಲೆಲ್ಲ ಇಡೀ ದೇಶವೇ ಜಾತಿ ಭೇದ ಮರೆತು ಒಂದಾಗುತ್ತದೆ ಎಂದು ವಿಶ್ವ ಹಿಂದೂ ಪರಿಷತ್ತಿನ ಡಾ. ಸುರೇಂದ್ರ ಜೈನ್ ಹೇಳಿದರು.