Thursday, 12th December 2024

ಪವಿತ್ರ ರಂಜಾನ್ ಮಾಸ ಇಂದಿನಿಂದ ಆರಂಭ

ನವದೆಹಲಿ: ದೇಶದ ಹಲವೆಡೆ ಚಂದ್ರ ದರ್ಶನವಾದ ಬಳಿಕ ಪವಿತ್ರ ರಂಜಾನ್ ಮಾಸ ಏ.3ರಂದು ಆರಂಭವಾಗಿದೆ.

ಭಾನುವಾರ ಉಪವಾಸದ ಮೊದಲ ದಿನ ಆರಂಭವಾಗಿದೆ. ಈ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿ ಹಲವು ಗಣ್ಯರು ಶುಭಾಶಯ ತಿಳಿಸಿ ದ್ದಾರೆ.

ಪವಿತ್ರ ರಂಜಾನ್ ತಿಂಗಳ ಆರಂಭದ ಹಿನ್ನೆಲೆ ಶುಭಾಶಯ ತಿಳಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, “ಈ ಪವಿತ್ರ ಮಾಸ ಬಡವರ ಸೇವೆ ಮಾಡಲು ಜನರನ್ನು ಪ್ರೇರೇಪಿಸಲಿ,” ಎಂದು ಟ್ವೀಟ್‌ನಲ್ಲಿ ಮೋದಿ ಹಾರೈಸಿದ್ದಾರೆ. “ಇದು ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಹಾನುಭೂತಿಯ ಮನೋಭಾವ ವನ್ನು ಮತ್ತಷ್ಟು ಹೆಚ್ಚಿಸುತ್ತದೆ,” ಎಂದಿದ್ದಾರೆ.

ಉಪ ರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಕೂಡಾ ಟ್ವೀಟ್‌ ಮೂಲಕ ಶುಭಾಶಯ ತಿಳಿಸಿದ್ದಾರೆ.

ಪವಿತ್ರ ರಂಜಾನ್ ತಿಂಗಳ ಆರಂಭದಲ್ಲಿ ಜನರಿಗೆ ಶುಭಾಶಯ ಕೋರಿದ್ದಾರೆ. “ರಂಜಾನ್ ದೇವರ ಮೇಲಿನ ನಂಬಿಕೆ, ಜೀವನದಲ್ಲಿ ಶುದ್ಧತೆ ಮತ್ತು ಬಡವರ ಬಗ್ಗೆ ಸಹಾನುಭೂತಿ ಯನ್ನು ಸಂಕೇತಿಸುತ್ತದೆ. ಈ ರಂಜಾನ್ ಜನರ ಜೀವನದಲ್ಲಿ ಶಾಂತಿ, ಸಮೃದ್ಧಿ ಮತ್ತು ಸಂತೋಷ ತರಲಿ,” ಎಂದು ಹಾರೈಸಿದ್ದಾರೆ.

ರಂಜಾನ್ ಇಸ್ಲಾಮಿಕ್ ಕ್ಯಾಲೆಂಡರ್‌ನ ಒಂಬತ್ತನೇ ತಿಂಗಳು ಮತ್ತು ಈದ್-ಉಲ್-ಫಿತರ್ ಅನ್ನು ಉಪವಾಸದ ತಿಂಗಳ ಕೊನೆ ಯಲ್ಲಿ ಆಚರಣೆ ಮಾಡಲಾಗುತ್ತದೆ. ಇನ್ನು ಈ ಪವಿತ್ರ ತಿಂಗಳ ಆರಂಭದಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಕೂಡಾ ಶುಭಾಶಯ ಹೇಳಿದ್ದಾರೆ. “ರಂಜಾನ್ ಮುಬಾರಕ್! ಈ ಪವಿತ್ರ ಮಾಸವು ಎಲ್ಲರಿಗೂ ಉತ್ತಮ ಆರೋಗ್ಯ, ಶಾಂತಿ ಮತ್ತು ಸಮೃದ್ಧಿ ತರಲಿ,” ಎಂದು ಟ್ವೀಟ್‌ ಮಾಡಿದ್ದಾರೆ.

ರಂಜಾನ್‌ನ ಈ ಪವಿತ್ರ ತಿಂಗಳು ಎಲ್ಲರಿಗೂ ಶಾಂತಿ ಮತ್ತು ಸಂತೋಷವನ್ನು ತರಲಿ. ಸರ್ವಶಕ್ತನು ನಮ್ಮೆಲ್ಲರ ಜೀವನವನ್ನು ಸಮೃದ್ಧಿ ಮತ್ತು ಬೆಳಕಿನಿಂದ ತುಂಬಲಿ ಎಂದು ಕರ್ನಾಟಕ ಆರೋಗ್ಯ ಸಚಿವ ಡಾ. ಕೆ ಸುಧಾಕರ್‌ ಹಾರೈಸಿದ್ದಾರೆ.