ಟ್ವೀಟ್ ಮಾಡಿ, ‘ಶ್ರೀರಾಮ ನವಮಿಯ ಈ ಪವಿತ್ರ ಸಂದರ್ಭದಲ್ಲಿ ದೇಶದ ಸಮಸ್ತ ಜನರಿಗೆ ಹೃತ್ಪೂರ್ವಕ ಶುಭಾಶಯಗಳು. ತ್ಯಾಗ, ತಪಸ್ಸು, ಸಂಯಮ ಮತ್ತು ಸಂಕಲ್ಪವನ್ನು ಆಧರಿಸಿದ್ದ ಮರ್ಯಾದಾ ಪುರುಷೋತ್ತಮ, ಪರಮಪುರುಷ ಭಗವಾನ್ ಶ್ರೀರಾಮಚಂದ್ರನ ಜೀವನ, ಪ್ರತಿ ಯುಗದಲ್ಲೂ ಸ್ಫೂರ್ತಿಯಾಗಿಯೇ ಇರುತ್ತದೆ’ ಎಂದು ತಿಳಿಸಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಟ್ವೀಟ್ ಮಾಡಿ ‘ಮರ್ಯಾದಾ ಪುರುಷೋ ತ್ತಮ ಶ್ರೀರಾಮನ ಆದರ್ಶಗಳನ್ನು ನಾವು ಪ್ರತಿ ಯೊಬ್ಬರೂ ನಮ್ಮದಾಗಿಸಿ ಕೊಳ್ಳಬೇಕು. ಜೀವನದ ಪ್ರತಿ ಹಂತದಲ್ಲೂ ನಾವು ಅದನ್ನು ಪಾಲಿಸಬೇಕು. ಈ ಮೂಲಕ ಭಾರತ ದೇಶವನ್ನು ವೈಭವಗೊಳಿಸಬೇಕು ಎಂದು ಹೇಳಿದ್ದಾರೆ.
ಗೃಹ ಸಚಿವ ಅಮಿತ್ ಶಾ ಅವರು ಟ್ವೀಟ್ ಮಾಡಿ ‘ಪ್ರಭು ಶ್ರೀರಾಮ ಧರ್ಮ ಮತ್ತು ಸತ್ಯದ ಹಾದಿಯಲ್ಲಿ ನಡೆದವನು. ಎಂಥದ್ದೇ ಕಷ್ಟಕರ ಸಂದರ್ಭ ಎದುರಾದರೂ ತಾಳ್ಮೆ ಮತ್ತು ದಯಾಗುಣ ಬಿಡಬಾರದು ಎಂಬುದನ್ನು ತೋರಿಸಿಕೊಟ್ಟವನು. ಶ್ರೀರಾಮ ಎಲ್ಲರನ್ನೂ ಆಶೀರ್ವದಿಸಲಿ’ ಎಂದಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಶ್ರೀರಾಮನವಮಿ ಪ್ರಯುಕ್ತ ದೇಶದ ಜನರಿಗೆ ಶುಭಕೋರಿದ್ದಾರೆ.