Thursday, 12th December 2024

ಹಂಗಾಮಿ ಸ್ಪೀಕರ್ ಆಗಿ ರಮಾಪತಿ ಶಾಸ್ತ್ರಿ ಪ್ರಮಾಣ ವಚನ ಸ್ವೀಕಾರ

ಲಖನೌ: ಉತ್ತರ ಪ್ರದೇಶ ವಿಧಾನಸಭೆಯ ಹಂಗಾಮಿ ಸ್ಪೀಕರ್ ಆಗಿ ಭಾರತೀಯ ಜನತಾ ಪಕ್ಷದ ಶಾಸಕ ರಮಾಪತಿ ಶಾಸ್ತ್ರಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ರಾಜ್ಯಪಾಲ ಆನಂದಿಬೆನ್ ಪಟೇಲ್ ಅವರು ರಾಜಭವನದಲ್ಲಿ ಪ್ರಮಾಣ ವಚನ ಬೋಧಿ ಸಿದರು. ಇತರ ನಾಯಕರಲ್ಲಿ ಜೈ ಪ್ರತಾಪ್ ಸಿಂಗ್, ಮಾತಾ ಪ್ರಸಾದ್ ಪಾಂಡೆ, ಸುರೇಶ್ ಖನ್ನಾ ಕೂಡ ಪ್ರಮಾಣ ವಚನ ಸ್ವೀಕರಿಸಿದರು. ಮಾರ್ಚ್ 28 ಮತ್ತು 29 ರಂದು ವಿಧಾನಸಭೆಯಲ್ಲಿ ಉಳಿದ ಎಲ್ಲಾ ಶಾಸಕರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ.

ಶುಕ್ರವಾರ, ಯೋಗಿ ಆದಿತ್ಯನಾಥ್ ಅವರು ಸತತ ಎರಡನೇ ಅವಧಿಗೆ ಯುಪಿ ಮುಖ್ಯ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಯೋಗಿ ಅವರು ಐದು ವರ್ಷಗಳ ಪೂರ್ಣ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ ನಂತರ ಮತ್ತೆ ಅಧಿಕಾರಕ್ಕೆ ಬಂದ ರಾಜ್ಯದ ಮೊದಲ ಸಿಎಂ ಎಂಬ ಹೆಗ್ಗಳಿಕೆಗೆ ಪಾತ್ರರಾಗಿ ದ್ದಾರೆ.