Sunday, 15th December 2024

Ramesh Pehalwan: ಬಿಜೆಪಿ ತೊರೆದು ಆಪ್‌ ಸೇರಿದ ರಮೇಶ್ ಪೆಹಲ್ವಾನ್ ದಂಪತಿ; ಚುನಾವಣೆಗೂ ಮುನ್ನ ಕಮಲ ಪಾಳಯಕ್ಕೆ ಶಾಕ್‌

Ramesh Pehalwan

ನವದೆಹಲಿ: ಭಾರತೀಯ ಜನತಾ ಪಕ್ಷದ ನಾಯಕ ರಮೇಶ್ ಪೆಹಲ್ವಾನ್ (Ramesh Pehalwan) ಮತ್ತು ಅವರ ಪತ್ನಿ ಕುಸುಮಲತಾ ಭಾನುವಾರ ಆಮ್ ಆದ್ಮಿ (Aam Aadmi Party) ಪಕ್ಷಕ್ಕೆ ಸೇರ್ಪಡೆಗೊಂಡರು. ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರ ಸಮ್ಮುಖದಲ್ಲಿ ದಂಪತಿಗಳು ಬಿಜೆಪಿ ತೊರೆದು ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.

ಅರವಿಂದ್‌ ಕೇಜ್ರಿವಾಲ್‌ ಹಾಗೂ ಆಮ್‌ ಆದ್ಮಿ ಪಕ್ಷದ ಮುಖಂಡರ ನೇತೃತ್ವದಲ್ಲಿ ಅವರು ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. 2025ರ ಆರಂಭದಲ್ಲಿ ನಡೆಯಲಿರುವ ದೆಹಲಿ ವಿಧಾನಸಭೆ ಚುನಾವಣೆಗೆ ಮುನ್ನ ಈ ಬೆಳವಣಿಗೆ ನಡೆದಿದೆ.

ರಮೇಶ್ ಪೆಹಲ್ವಾನ್ ಅವರು ಮುಂಬರುವ ಚುನಾವಣೆಯಲ್ಲಿ ಕಸ್ತೂರ್ಬಾ ನಗರ ಕ್ಷೇತ್ರದಿಂದ ರಮೇಶ್ ಪೆಹಲ್ವಾನ್ ಸ್ಪರ್ಧಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಅವರ ಪತ್ನಿ ಕುಸುಮ್ ಲತಾ ಅವರು ದಕ್ಷಿಣ ದೆಹಲಿಯ ಕೋಟ್ಲಾ ಮುಬಾರಕ್‌ಪುರ ವಾರ್ಡ್‌ನಿಂದ ಎರಡು ಬಾರಿ ಮುನ್ಸಿಪಲ್ ಕಾರ್ಪೊರೇಷನ್ (MCD) ಕೌನ್ಸಿಲರ್ ಆಗಿದ್ದಾರೆ.

ಈ ಬಗ್ಗೆ ಮಾತನಾಡಿದ ಅರವಿಂದ್‌ ಕೇಜ್ರಿವಾಲ್‌ 2013ರಲ್ಲಿ ರಮೇಶ್‌ ಜಿ ಪಕ್ಷ ಸೇರಿದ್ದರು. ಇಂದು ಏಳು ವರ್ಷಗಳ ನಂತರ ಮನೆಗೆ ಮರಳುತ್ತಿದ್ದಾರೆ. ರಮೇಶ್‌ ಜೀ ಮತ್ತು ಕುಸುಮ ಲತಾಜಿ ಅವರು ದಿನದ 24 ಗಂಟೆಯೂ ಜನರೊಂದಿಗೆ ಅವರ ಸುಖ-ದುಃಖದಲ್ಲಿ ಇರುತ್ತಾರೆ. ಇಂದು ನಾನು ಅವರನ್ನು ಮರಳಿ ಸ್ವಾಗತಿಸುತ್ತೇನೆ ಎಂದು ಹೇಳಿದ್ದಾರೆ.

ರಮೇಶ್ ಪೆಹಲ್ವಾನ್ ಮಾತನಾಡಿ ಹಲವು ವರ್ಷಗಳ ಬಳಿಕ ನಾನು ನನ್ನ ಮನೆಗೆ ಮರಳುತ್ತಿದ್ದೇನೆ. ದೆಹಲಿ ಜನರ ಸೇವೆ ಮಾಡಬಯಸುತ್ತೇನೆ ಎಂದು ಹೇಳಿದ್ದಾರೆ.

ದೆಹಲಿಯಲ್ಲಿ ವಿಧಾನ ಸಭಾ ಚುನಾವಣೆಯಲ್ಲಿ ಹತ್ತಿರದಲ್ಲಿದ್ದು, ಬುಧವಾರ ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕಿದ್ದರು. ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕೇಜ್ರಿವಾಲ್, “ಆಮ್ ಆದ್ಮಿ ಪಕ್ಷವು ದೆಹಲಿಯಲ್ಲಿ ತನ್ನ ಸ್ವಂತ ಬಲದ ಮೇಲೆ ಈ ಚುನಾವಣೆಯಲ್ಲಿ ಹೋರಾಡಲಿದೆ. ಕಾಂಗ್ರೆಸ್ ಜೊತೆ ಯಾವುದೇ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇಲ್ಲ” ಎಂದು ಹೇಳಿದ್ದರು.

ಈ ಸುದ್ದಿಯನ್ನು ಓದಿ : Arvind Kejriwal : ಮಹಾರಾಷ್ಟ್ರದಲ್ಲಿ ಆಪ್‌ ಸ್ಪರ್ಧೆ ಇಲ್ಲ; ಮಿತ್ರ ಪಕ್ಷಕ್ಕಾಗಿ ಪ್ರಚಾರ ಮಾಡಲಿದ್ದಾರೆ ಕೇಜ್ರಿವಾಲ್‌