Sunday, 15th December 2024

ರಾಮಮಂದಿರ ನಿರ್ಮಾಣದ ನಂತರ ಮೌನ ಮುರಿಯುತ್ತೇನೆ: ಜಾರ್ಖಂಡ್‌ನ ’ಮೌನಿ ಮಾತಾ’

ನ್‌ಬಾದ್: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ನಂತರ ಮೌನ ಮುರಿಯುತ್ತೇನೆ ಎಂದು ಶಪಥಗೈದಿದ್ದ ಮಹಿಳೆ ಬರೋಬ್ಬರಿ 30 ವರ್ಷದ ನಂತರ ಮಾತನಾಡಲಿದ್ದಾರೆ.

ಜಾರ್ಖಂಡ್‌ನ 85 ವರ್ಷದ ಸರಸ್ವತಿ ದೇವಿ 1992ರ ಡಿ.6ರಂದು ಜನ್ಮಸ್ಥಾನದಲ್ಲಿ ದಾಳಿಕೋರರು ನಿರ್ಮಿಸಿದ್ದ ಕಟ್ಟಡ ಕರಸೇವಕರಿಂದ ನೆಲಸಮವಾಗಿದ್ದು, ಅಂದು ಸರಸ್ವತಿ ದೇವಿ ಮೌನವ್ರತ ಕೈಗೊಂಡಿದ್ದರು.

ಜ.22ರಂದು ಸರಸ್ವತಿ ದೇವಿ ಅಗರ್ವಾಲ್ ತಮ್ಮ ಕನಸು ನನಸಾಗುತ್ತಿರುವುದರಿಂದ ಅಂದಿನಿಂದ ಮತ್ತೆ ಮಾತನಾಡಲು ತೀರ್ಮಾನಿಸಿದ್ದಾರೆ. 30 ವರ್ಷದ ಅವರ ಮೌನ ದೀಕ್ಷೆ ಕೊನೆಗೊಳ್ಳುವ ಕಾಲ ರಾಮಮಂದಿರ ನಿರ್ಮಾಣದೊಂದಿಗೆ ಸನ್ನಿಹಿತವಾಗಿದೆ. ಮೌನಿ ಮಾತಾ ಎಂದೇ ಸರಸ್ವತಿ ದೇವಿಯನ್ನು ಜನರು ಕರೆಯುತ್ತಿದ್ದರು.

ತನ್ನ ಕುಟುಂಬದ ಸದಸ್ಯರು ಅಥವಾ ಸಾರ್ವಜನಿಕರೊಂದಿಗೆ ಕೇವಲ ಸಂಕೇತದಿಂದ ಸಂವಹನ ನಡೆಸುತ್ತಿದ್ದ ಆಕೆ ಕೆಲವು ಸಂದರ್ಭಗಳಲ್ಲಿ ಕಾಗದದ ಮೇಲೆ ದೊಡ್ಡ ಅಕ್ಷರದಲ್ಲಿ ಬರೆದು ತೋರಿಸುತ್ತಿದ್ದರು. ಕಾಮೆಂಟ್​ಗಳನ್ನು ಸಹ ಬರೆಯುತ್ತಿದ್ದರು.

ರಾಮಮಂದಿರ ಉದ್ಘಾಟನೆ ಸಂದರ್ಭ, ರೈಲಿನಲ್ಲಿ ಅಯೋಧ್ಯೆಗೆ ತೆರಳುತ್ತಿರುವುದಾಗಿ ಮೌನಿ ಮಾತಾ ಪುತ್ರ ಹರೇ ರಾಮ್ ಅಗರ್ವಾಲ್ (55) ತಿಳಿಸಿದರು.