ಶಂಕುಸ್ಥಾಪನೆ ನೆರವೇರಿಸಿದ ರಾಷ್ಟ್ರಪತಿ ರಾಮನಾಥ ಕೋವಿಂದ ರವರಿಗೆ ಗೋವಾ ರಾಜ್ಯಪಾಲ ಪಿ.ಎಸ್ ಶ್ರೀಧರನ್ ಪಿಳ್ಳೆ ಧನ್ಯವಾದ ಹೇಳಿದರು. ಸದ್ಯದ ವಿಲಕ್ಷಣ ಸನ್ನಿವೇಶದಿಂದಾಗಿ ರಾಷ್ಟ್ರಪತಿಗಳು ಭಾಷಣ ಮಾಡುವುದಿಲ್ಲ ಎಂದು ರಾಜ್ಯಪಾಲರು ಹೇಳಿದರು.
ಗೋವಾ ರಾಜಭವನವು ರಾಷ್ಟ್ರೀಯ ಸ್ಮಾರಕವಾಗಿ ಘೋಷಣೆಯಾಗಿದೆ. ಆದರೆ ಭದ್ರತೆ ಮತ್ತು ಇತರ ಕೆಲ ಕಾರಣಗಳಿಂದಾಗಿ ರಾಜಭವನ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಲಭಿಸುತ್ತಿಲ್ಲ. ಗೋವಾ ರಾಜಭವನವು 450 ವರ್ಷಗಳಷ್ಟು ಹಳೆಯದಾಗಿದೆ. ಇದರಿಂದಾಗಿ ಹೊಸ ರಾಜಭವನ ನಿರ್ಮಾಣಕ್ಕೆ ಚಾಲನೆ ದೊರೆತಿದೆ. ಹಳೇಯ ರಾಜಭವನವನ್ನು ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಲಾಗಿರುವುದರಿಂದ ಹೊಸ ರಾಜಭವನ ನಿರ್ಮಾಣಗೊಂಡ ನಂತರವೂ ಹಳೆಯ ರಾಜಭವನವನ್ನು ಕೆಡವಿಹಾಕಲು ಅಥವಾ ಯಾವುದೇ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ಗೋವಾ ರಾಜ್ಯಪಾಲ ಹೇಳಿದರು.