Sunday, 15th December 2024

ಬುಲ್ಡೋಜರ್‌ನಿಂದ ಅತ್ಯಾಚಾರ ಆರೋಪಿ ಮನೆ ಧ್ವಂಸ

ಭೋಪಾಲ್‌: ಹಿಳಾ ಪೊಲೀಸರ ಗುಂಪೊಂದು ಮಧ್ಯಪ್ರದೇಶದಲ್ಲಿ ಅತ್ಯಾಚಾರ ಆರೋಪಿಯ ಮನೆಯನ್ನ ಬುಲ್ಡೋಜರ್‌ನಿಂದ ಕೆಡವಿ ಹಾಕಿದೆ.

ರಾಜಧಾನಿ ಭೋಪಾಲ್‌ನಿಂದ ಸುಮಾರು 250 ಕಿಮೀ ದೂರದಲ್ಲಿರುವ ದಾಮೋಹ್‌ನಲ್ಲಿ ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿದ್ದು ನಾಲ್ಕನೆಯವನಾದ ಕೌಶಲ್ ಕಿಶೋರ್ ಚೌಬೆ ಪರಾರಿಯಾಗಿದ್ದಾನೆ.

ಆರೋಪಿ ಆಕ್ರಮಿತ ಜಮೀನಿನಲ್ಲಿ ಅಕ್ರಮವಾಗಿ ಮನೆ ಕಟ್ಟಿಕೊಂಡಿದ್ದ. ಹೀಗಾಗಿ ಮನೆ ಕೆಡವಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

“ಅಪ್ರಾಪ್ತ ಬಾಲಕಿಯ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ವ್ಯಕ್ತಿ ಪರಾರಿಯಾಗಿದ್ದಾನೆ. ಕೌಶಲ್ ಕಿಶೋರ್ ಚೌಬೆ ಅಕ್ರಮವಾಗಿ ಭೂಮಿಯನ್ನು ವಶಪಡಿಸಿಕೊಂಡಿದ್ದ. ಮಹಿಳಾ ಅಧಿಕಾರಿಗಳ ಗುಂಪಿನಿಂದ ಮನೆಯ ಮೇಲೆ ಬುಲ್ಡೋಜರ್ ಕಾರ್ಯನಿರ್ವಹಿಸುತ್ತಿದೆ. ಮಹಿಳಾ ಅಧಿಕಾರಿಗಳು ಉತ್ತಮ ಕೆಲಸ ಮಾಡಿದ್ದಾರೆ ಮತ್ತು ಇಂತಹ ಕ್ರಮಗಳು ಮುಂದುವರೆಯಬೇಕು” ಎಂದು ರಾಣೆ ಪೊಲೀಸ್ ಠಾಣಾಧಿಕಾರಿ ಪ್ರಶಿತಾ ಕುರ್ಮಿ ಹೇಳಿದ್ದಾರೆ.