ಬೆಂಗಳೂರು: ಟಾಟಾ ಸನ್ಸ್ ಅಧ್ಯಕ್ಷ ರತನ್ ಟಾಟಾ (Ratan Tata) ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಮತ್ತು ಮುಂಬೈನ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ರಾಯಿಟರ್ಸ್ ಬುಧವಾರ ವರದಿ ಮಾಡಿದೆ. 86 ವರ್ಷದ ಕೈಗಾರಿಕೋದ್ಯಮಿ ಈ ವಾರದ ಆರಂಭದಲ್ಲಿ ಅಸ್ವಸ್ಥಗೊಂಡಿದ್ದಾರೆ ಎಂದು ವರದಿಯಾಗಿತ್ತು. ಬಳಿಕ ಪ್ರಕಟಣೆ ಹೊರಡಿಸಿದ್ದ ಅವರು ವಯಸ್ಸು ಸಂಬಂಧಿತ ಆರೋಗ್ಯ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದರು. ಆದಾಗ್ಯೂ, ಅವರ ಸ್ಥಿತಿ ಹದಗೆಟ್ಟಿದ್ದರಿಂದ ಆತಂಕಗಳು ಹೆಚ್ಚಿವೆ.
ಸೋಮವಾರ, ಟಾಟಾ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹೇಳಿಕೆಯನ್ನು ಪೋಸ್ಟ್ ಮಾಡಿ, ಅವರ ಆರೋಗ್ಯದ ಕುರಿತ ಆತಂಕವನ್ನು ಪರಿಹರಿಸಿದ್ದರು. ಪೋಸ್ಟ್‌ನಲ್ಲಿ ಅವರು ಗಂಭೀರ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂಬ ವರದಿಗಳನ್ನು ನಿರಾಕರಿಸಿದ್ದರು. “ಆತಂಕಕ್ಕೆ ಕಾರಣವಿಲ್ಲ. ನಾನು ಉತ್ತಮವಾಗಿದ್ದೇನೆ ಎಂದು ಹೇಳಿಕೊಂಡಿದ್ದರು.
ರತನ್ ಟಾಟಾ ಭಾರತೀಯ ಉದ್ಯಮ ಕ್ಷೇತ್ರದ ಅತ್ಯುನ್ನತ ವ್ಯಕ್ತಿ. ಅವರು 1991ರಲ್ಲಿ ಭಾರತದ ಅತಿದೊಡ್ಡ ಮತ್ತು ಅತ್ಯಂತ ಪ್ರಭಾವಶಾಲಿ ಸಂಸ್ಥೆಗಳಲ್ಲಿ ಒಂದಾದ ಟಾಟಾ ಸನ್ಸ್ನ ಅಧ್ಯಕ್ಷರಾದರು. 2012 ರವರೆಗೆ ಸಮೂಹವನ್ನು ಮುನ್ನಡೆಸಿದ್ದರು. ಅವರ ಅಧಿಕಾರಾವಧಿಯಲ್ಲಿ, ಟಾಟಾ ಗ್ರೂಪ್ ಜಾಗತಿಕವಾಗಿ ವಿಸ್ತರಿಸಿತ್ತು. ಟೆಟ್ಲಿ, ಕೋರಸ್ ಮತ್ತು ಜಾಗ್ವಾರ್ ಲ್ಯಾಂಡ್ ರೋವರ್‌ನಂಥ ಪ್ರಮುಖ ಕಂಪನಿಗಳನ್ನು ಸ್ವಾಧೀನಪಡಿಸಿಕೊಂಡಿತು. ಟಾಟಾವನ್ನು ಹೆಚ್ಚಾಗಿ ದೇಶೀಯ ಸಂಸ್ಥೆಯಿಂದ ಜಾಗತಿಕ ಶಕ್ತಿ ಕೇಂದ್ರವಾಗಿ ಪರಿವರ್ತಿಸಿತು.
ಟಾಟಾ ಅವರ ನಾಯಕತ್ವದಲ್ಲಿ, ಗ್ರೂಪ್ ವಿಶ್ವದ ಅಗ್ಗದ ಕಾರು ಟಾಟಾ ನ್ಯಾನೋ ಬಿಡುಗಡೆಗೊಂಡಿತ್ತು. ಅದರ ಸಾಫ್ಟ್‌ವೇರ್ ಸೇವೆಗಳ ವಿಭಾಗವಾದ ಟಾಟಾ ಕನ್ಸಲ್ಟೆನ್ಸ್ ಸರ್ವೀಸಸ್ (ಟಿಸಿಎಸ್) ಅನ್ನು ಜಾಗತಿಕ ಐಟಿ ನಾಯಕನಾಗಿ ವಿಸ್ತರಿಸಿತು.
ಇದನ್ನೂ ಓದಿ: Bomb Threat : ಲಂಡನ್- ದೆಹಲಿ ವಿಸ್ತಾರಾ ವಿಮಾನಕ್ಕೆ ಬಾಂಬ್ ಬೆದರಿಕೆ; ಟಿಶ್ಯೂ ಪೇಪರ್‌ನಲ್ಲಿತ್ತು ಸಂದೇಶ
ಟಾಟಾ 2012 ರಲ್ಲಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದರು. ಬಳಿಕ ಟಾಟಾ ಸನ್ಸ್ ಮತ್ತು ಟಾಟಾ ಮೋಟಾರ್ಸ್ ಮತ್ತು ಟಾಟಾ ಸ್ಟೀಲ್ ಸೇರಿದಂತೆ ಇತರ ಸಮೂಹ ಕಂಪನಿಗಳ ಎಮೆರಿಟಸ್ ಎಂದು ಕರೆಯಲಾಯಿತು. ಬಳಿಕ ನಾಯಕತ್ವದ ವಿವಾದದ ಸಮಯದಲ್ಲಿ ಅವರು 2016ರಲ್ಲಿ ಮಧ್ಯಂತರ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.