Wednesday, 11th December 2024

ಮಾಜಿ ಉದ್ಯೋಗಿಯ ಆರೋಗ್ಯ ವಿಚಾರಿಸಿದ ರತನ್ ಟಾಟಾಗೆ ಮೆಚ್ಚುಗೆಯ ಮಹಾಪೂರ

ಪುಣೆ: ಅನಾರೋಗ್ಯಕ್ಕೀಡಾದ ಮಾಜಿ ಉದ್ಯೋಗಿಯ ಆರೋಗ್ಯ ವಿಚಾರಿಸುವುದಕ್ಕಾಗಿ ಕೈಗಾರಿಕೋದ್ಯಮಿ ರತನ್ ಟಾಟಾ ಮುಂಬೈ ನಿಂದ ಪುಣೆಗೆ ತೆರಳಿದ್ದು, ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗತೊಡಗಿದೆ.

ಯೋಗೇಶ್ ದೇಸಾಯಿ ಎಂಬುವರು ತಮ್ಮ ಲಿಂಕ್ಡ್ ಇನ್ ಖಾತೆಯಲ್ಲಿ ಘಟನೆಯನ್ನು ಹಂಚಿಕೊಂಡಿದ್ದಾರೆ.

ಕಳೆದ 2 ವರ್ಷಗಳಿಂದ ಉದ್ಯೋಗಿಗೆ ಆರೋಗ್ಯ ಸರಿ ಇಲ್ಲ ಎಂಬ ಮಾಹಿತಿ ರತನ್ ಗೆ ತಲುಪಿದ್ದು, ತಕ್ಷಣವೇ ಪುಣೆಯಲ್ಲಿರುವ ಫ್ರೆಂಡ್ಸ್ ಸೊಸೈಟಿಗೆ ಭೇಟಿ ನೀಡಿ ಉದ್ಯೋಗಿಯ ಆರೋಗ್ಯ ವಿಚಾರಿಸಿದ್ದಾರೆ.

ಯೋಗೀಶ್ ಅವರು ರತನ್ ಟಾಟಾ ಉದ್ಯೋಗಿಯೊಂದಿಗೆ ಮಾತನಾಡುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.