Thursday, 12th December 2024

ಏಪ್ರಿಲ್ 1ರಂದು 2,000 ರೂ.ಗಳ ನೋಟು ವಿನಿಮಯ, ಠೇವಣಿ ಅಸಾಧ್ಯ: ಆರ್‌.ಬಿ.ಐ

ವದೆಹಲಿ: ಏಪ್ರಿಲ್ 1ರಂದು ದೇಶಾದ್ಯಂತ ತನ್ನ 19 ವಿತರಣಾ ಕಚೇರಿಗಳಲ್ಲಿ 2,000 ರೂ.ಗಳ ನೋಟುಗಳ ವಿನಿಮಯ ಅಥವಾ ಠೇವಣಿ ಸಾಧ್ಯವಿಲ್ಲ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೇಳಿದೆ. ಖಾತೆಗಳ ವಾರ್ಷಿಕ ಮುಚ್ಚುವಿಕೆಗೆ ಸಂಬಂಧಿಸಿದ ಕಾರ್ಯಾಚರಣೆ ಗಳಿಂದಾಗಿ ಈ ತಾತ್ಕಾಲಿಕ ನಿಲುಗಡೆಯಾಗಿದೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪ್ರಕಟಣೆಯ ಪ್ರಕಾರ, ಈ ಸೌಲಭ್ಯವು ಏಪ್ರಿಲ್ 2ರಂದು ಪುನರಾರಂಭಗೊಳ್ಳಲಿದೆ.

ವಾರ್ಷಿಕ ಮುಚ್ಚುವಿಕೆಗೆ ಸಂಬಂಧಿಸಿದ ಕಾರ್ಯಾಚರಣೆಗಳಿಂದಾಗಿ 2,000 ರೂ.ಗಳ ನೋಟುಗಳ ವಿನಿಮಯ / ಠೇವಣಿ ಸೌಲಭ್ಯವು ಏಪ್ರಿಲ್ 1ರಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ 19 ವಿತರಣಾ ಕಚೇರಿಗಳಲ್ಲಿ ಲಭ್ಯವಿರುವುದಿಲ್ಲ ಎಂದು ಅದು ಹೇಳಿದೆ.

ಮೇ 19, 2023 ರಂದು ಚಲಾವಣೆಯಿಂದ 2,000 ರೂ ಮುಖಬೆಲೆಯ ನೋಟುಗಳನ್ನು ಹಿಂತೆಗೆದುಕೊಳ್ಳುವುದಾಗಿ ಆರ್ಬಿಐ ಈ ಹಿಂದೆ ಘೋಷಿ ಸಿತ್ತು. ಫೆಬ್ರವರಿ 29 ರ ಹೊತ್ತಿಗೆ, ಸುಮಾರು 97.62 ಪ್ರತಿಶತದಷ್ಟು 2,000 ರೂ ನೋಟುಗಳು ಬ್ಯಾಂಕಿಂಗ್ ವ್ಯವಸ್ಥೆಗೆ ಮರಳಿವೆ. 8,470 ಕೋಟಿ ಮೌಲ್ಯದ ಹಿಂಪಡೆದ ನೋಟುಗಳು ಮಾತ್ರ ಇನ್ನೂ ಸಾರ್ವಜನಿಕರ ವಶದಲ್ಲಿವೆ.