Thursday, 12th December 2024

ಹಣಕಾಸು ನೀತಿ ಸಮಿತಿ ತ್ರೈಮಾಸಿಕ ಸಭೆ ನಾಳೆಯಿಂದ ಆರಂಭ

ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಭಾನುವಾರ ಘೋಷಣೆ ಮಾಡಿರುವಂತೆ, ಹಣಕಾಸು ನೀತಿ ಸಮಿತಿ ತ್ರೈಮಾಸಿಕ ಸಭೆಯನ್ನು ಒಂದು ದಿನ ಮುಂದೂಡಲಾಗಿದೆ.
ಲತಾ ಮಂಗೇಶ್ಕರ್​ ಅವರ ನಿಧನದಿಂದಾಗಿ ಸಭೆ ಫೆ.8ರಂದು ಆರಂಭಗೊಳ್ಳಲಿದ್ದು, ಫೆ.10ಕ್ಕೆ ನಿರ್ಣಯ ಗಳನ್ನು ಘೋಷಿಸಲಾಗುತ್ತೆ. ಗಾನ ಕೋಗಿಲೆ ಲತಾ ಮಂಗೇಶ್ಕರ್​ ನಿಧನಕ್ಕೆ ಮಹಾರಾಷ್ಟ್ರ ಸರ್ಕಾರ ರಜೆ ಘೋಷಿಸಿ ಲತಾ ಮಂಗೇಶ್ಕರ್​​ ಅವರಿಗೆ ಗೌರವ ಸೂಚಿಸಿದೆ.
ನೆಗೋಷಿಯೆಬಲ್ ಇನ್​​ಸ್ಟ್ರುಮೆಂಟ್ಸ್ ಕಾಯ್ದೆ 1881 ಸೆಕ್ಷನ್ 25ರ ಅಡಿಯಲ್ಲಿ ಮಹಾರಾಷ್ಟ್ರ ಸರ್ಕಾರವು ಭಾರತರತ್ನ ಕು. ಲತಾ ಮಂಗೇಶ್ಕರ್ ಅವರಿಗೆ ಗೌರವ ಸಲ್ಲಿಸುವ ಪ್ರಯುಕ್ತ ಆರ್​ಬಿಐ ಹಣಕಾಸು ಸಮಿತಿ ಸಭೆಯನ್ನು ಫೆಬ್ರವರಿ 8ರಿಂದ 10ರ ತನಕ ಮರು ನಿಗದಿ ಮಾಡಲಾಗಿದೆ ಎಂದು ಆರ್​ಬಿಐ ಹೇಳಿಕೆಯಲ್ಲಿ ತಿಳಿಸಿದೆ. ಕೇಂದ್ರ ಬಜೆಟ್ 2022ರ ಮಂಡನೆ ಆದ ನಂತರದ ಮೊದಲ ಹಣಕಾಸು ನೀತಿ ಸಮಿತಿ ಸಭೆ ಇದಾಗಿದೆ.