Monday, 16th September 2024

2,000 ಕರೆನ್ಸಿ ನೋಟು ಚಲಾವಣೆಗೆ ತಡೆ: ಮೇ 23 ರಿಂದ ವಿನಿಮಯ

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ 2,000 ಮುಖಬೆಲೆಯ ಕರೆನ್ಸಿ ನೋಟು ಗಳನ್ನು ಚಲಾವಣೆಯಿಂದ ಹಿಂಪಡೆಯುವು ದಾಗಿ ಘೋಷಿಸಿದೆ. ಚಲಾವಣೆಯಲ್ಲಿರುವ ನೋಟುಗಳನ್ನು ಬ್ಯಾಂಕ್ ಖಾತೆಗಳಲ್ಲಿ ಠೇವಣಿ ಮಾಡಬಹುದು ಅಥವಾ ಸೆಪ್ಟೆಂಬರ್ 30ರೊಳಗೆ ವಿನಿಮಯ ಮಾಡಿಕೊಳ್ಳಬಹುದು ಎಂದು ಕೂಡ ತಿಳಿಸಿದೆ.

ಆದರೆ ಕಾರ್ಯಾಚರಣೆಯ ಅನುಕೂಲತೆ ಖಚಿತಪಡಿಸಿಕೊಳ್ಳಲು ಮತ್ತು ಬ್ಯಾಂಕ್ ಶಾಖೆಗಳ ನಿಯಮಿತ ಚಟುವಟಿಕೆಗಳಿಗೆ ಅಡ್ಡಿಯಾಗುವುದನ್ನು ತಪ್ಪಿಸಲು, 2,000 ರೂಪಾಯಿ ಮುಖಬೆಲೆಯ ಬ್ಯಾಂಕ್ ನೋಟುಗಳನ್ನು ಇತರ ಮುಖಬೆಲೆಯ ಬ್ಯಾಂಕ್ ನೋಟುಗಳಾಗಿ ವಿನಿಮಯ ಮಾಡಿಕೊಳ್ಳುವುದನ್ನು ಇದೇ ಮೇ 23ರಿಂದ ಆರಂಭಿಸಲಿದೆ.

ಮೇ 23 ರಿಂದ ಆರ್ಬಿಐನ 19 ಪ್ರಾದೇಶಿಕ ಕಚೇರಿಗಳಲ್ಲಿ (ಆರ್ಒ) 2,000 ರೂಪಾಯಿಗಳ ಬ್ಯಾಂಕ್ ನೋಟುಗಳನ್ನು 20,000 ರೂಪಾಯಿಗಳ ಮಿತಿಯವರೆಗೆ ವಿನಿಮಯ ಮಾಡಿ ಕೊಳ್ಳುವ ಸೌಲಭ್ಯವನ್ನು ಮೇ 23 ರಿಂದ ಒದಗಿಸಲಾಗುವುದು.

2,000 ಮುಖಬೆಲೆಯ ಬ್ಯಾಂಕ್ ನೋಟನ್ನು ನವೆಂಬರ್ 2016 ರಲ್ಲಿ ಪರಿಚಯಿಸಲಾಗಿತ್ತು.

2,000 ರೂಪಾಯಿ ನೋಟುಗಳನ್ನು ಕಪ್ಪುಹಣ ಸಂಗ್ರಹಿಸಲು ಮತ್ತು ಅಕ್ರಮ ಹಣ ವರ್ಗಾವಣೆಗೆ ಬಳಸಲಾಗಿದೆ ಎಂದು ವರದಿ ಯಾದ ಹಿನ್ನೆಲೆಯಲ್ಲಿ ಹಿಂಪಡೆಯಲಾಗಿದೆ. ಆರ್ಬಿಐ 2018-19 ರಿಂದ ಹೊಸ 2,000 ರೂಪಾಯಿ ನೋಟುಗಳ ಮುದ್ರಣವನ್ನು ನಿಲ್ಲಿಸಿತ್ತು.