ನವದೆಹಲಿ: ಎರಡು ಸಾವಿರ ( 2000) ರೂ.ಮುಖಬೆಲೆಯ ನೋಟುಗಳನ್ನು ಬ್ಯಾಂಕ್ ಗಳಿಗೆ ಹಿಂದಿರುಗಿಸಿ, ಬೇರೆ ನೋಟು ಪಡೆಯುವಂತೆ ಸೆ.30ರವರೆಗೆ ಗಡುವು ನೀಡಿತ್ತು. ಆ ಗಡುವು ಮುಕ್ತಾಯಕ್ಕೆ ಮೂರು ದಿನ ಬಾಕಿ ಉಳಿದಿದೆ.
ಸೆ.30ರೊಳಗೆ 2000 ಮುಖಬೆಲೆಯ ನೋಟುಗಳನ್ನು ಬದಲಾವಣೆ ಮಾಡಿಕೊಳ್ಳಬೇಕಿದೆ. ಈ ಗಡುವು ಮುಗಿಯೋದಿಕ್ಕೆ ಮೂರು ದಿನ ಮಾತ್ರವೇ ಬಾಕಿ ಇದೆ. ಹೀಗಾಗಿ ನಿಮ್ಮ ಹತ್ತಿರ 2000 ಮುಖ ಬೆಲೆಯ ನೋಟು ಇದ್ದರೇ ಬ್ಯಾಂಕಿಗೆ ತೆರಳಿ ಕೊಟ್ಟು, ಬೇರೆ ನೋಟು ಪಡೆಯಿರಿ.
ಒಂದು ವೇಳೆ ಗಡುವು ಮುಗಿದ ನಂತರವೂ ಬದಲಾವಣೆ ಮಾಡಿಕೊಳ್ಳೋದಕ್ಕೆ ಸಾಧ್ಯವೇ ಎಂದು ಅನೇಕರು ಅನುಮಾನ ವ್ಯಕ್ತ ಪಡಿಸುತ್ತಿದ್ದಾರೆ. ಆ ಬಗ್ಗೆ ಅಕ್ಟೋಬರ್.1ರ ಬಳಿ ಆರ್ ಬಿಐ ಯಾವ ನಿರ್ಧಾರ ಪ್ರಕಟಿಸಲಿದೆಯೋ ಆ ನಿರ್ಧಾರದ ಮೇಲೆ ಆಧಾರವಾಗಿರಲಿದೆ.
ಈಗಾಗಲೇ ಚಲಾವಣೆಯಲ್ಲಿದ್ದ 3.32 ಲಕ್ಷ ಕೋಟಿ ರೂ ಮೌಲ್ಯದ ನೋಟುಗಳ ಪೈಕಿ, ಶೇ.93ರಷ್ಟು ನೋಟುಗಳು ಬ್ಯಾಂಕ್ ಗಳಿಗೆ ಮರಳಿವೆ.