Thursday, 12th December 2024

ಭಾರತೀಯ ಆರ್ಥಿಕತೆ, ಸಮುದಾಯಕ್ಕೆ ರೆಕಿಟ್ ನೀಡುತ್ತಿರುವ ಬೆಂಬಲ ಉಲ್ಲೇಖಿಸಿದ ಆಕ್ಸ್‌ಫರ್ಡ್‌ ಎಕಾನಮಿಕ್ಸ್‌

• 2021 ರಲ್ಲಿ ಭಾರತದ ಜಿಡಿಪಿಗೆ ರೂ. 78.81 ಬಿಲಿಯನ್‌ (£775 ಮಿಲಿಯನ್) ಕೊಡುಗೆ ನೀಡಿದ ರೆಕಿಟ್‌
• ಭಾರತದ ಆರ್ಥಿಕತೆಗೆ ರಾಷ್ಟ್ರೀಯ ಸರಾಸರಿಯ 6 ಪಟ್ಟು ಕೊಡುಗೆ ನೀಡಿರುವ ರೆಕಿಟ್ ಉದ್ಯೋಗಿಗಳು
• 2021 ರಲ್ಲಿ ಭಾರತದ ಆರ್ಥಿಕತೆಯಾದ್ಯಂತ 69,000 ಕ್ಕೂ ಹೆಚ್ಚು ಉದ್ಯೋಗಗಳನ್ನು ರೆಕಿಟ್ ಬೆಂಬಲಿಸಿದೆ

ನವದೆಹಲಿ: ರೆಕಿಟ್‌ನ ಪ್ರಮುಖ ಮೂರು ಮಾರ್ಕೆಟ್‌ಗಳಲ್ಲಿ ಒಂದಾಗಿರುವ ಭಾರತದ ರೆಕಿಟ್ ಬೆಂಕಿಸರ್ ಗ್ರೂಪ್‌ ಪಿಎಲ್‌ಸಿ (“ರೆಕಿಟ್”) ನ ತನ್ನ ಸ್ವತಂತ್ರ ವಿಶ್ಲೇಷಣೆಯನ್ನು ಆಕ್ಸ್‌ಫರ್ಡ್‌ ಎಕಾನಮಿಕ್ಸ್‌ ಇಂದು ಪ್ರಕಟಿಸಿದೆ. ಆರೋಗ್ಯ, ನೈರ್ಮಲ್ಯ ಮತ್ತು ಪೌಷ್ಠಿಕಾಂಶ ಉತ್ಪನ್ನಗಳಲ್ಲಿ ಜಾಗತಿಕ ನಾಯಕನಾಗಿರುವ ರೆಕಿಟ್‌, 2021 ರಲ್ಲಿ ಭಾರತದ ನಿವ್ವಳ ದೇಶೀಯ ಉತ್ಪನ್ನ (ಜಿಡಿಪಿ) ಗೆ ರೂ. 78.8 ಬಿಲಿಯನ್ (£775 ಮಿಲಿಯನ್) ಕೊಡುಗೆಯನ್ನು ರೆಕಿಟ್ ನೀಡಿದೆ.

ಮೂರು ಪ್ರಮುಖ ಪರಿಣಾಮಗಳನ್ನು ಕ್ರೋಢೀಕರಿಸಿ ಭಾರತದ ಆರ್ಥಿಕತೆ ಮತ್ತು ಸಮಾಜಕ್ಕೆ ರೆಕಿಟ್ ಒದಗಿಸಿದ ಮೌಲ್ಯವನ್ನು ವರದಿಯು ವಿಶ್ಲೇಷಿಸಿದೆ, ಅವುಗಳೆಂದರೆ: ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ), ಉದ್ಯೋಗ ಮತ್ತು ಸರ್ಕಾರದ ಸ್ವೀಕೃತಿಗಳು 2021 ರಲ್ಲಿ.

ಇತರ ವರದಿ ಮುಖ್ಯಾಂಶಗಳು ಒಳಗೊಂಡಿರುವುದೇನೆಂದರೆ:

• ಅಧಿಕ ಜಿಡಿಪಿ ಮಲ್ಟಿಪ್ಲೈಯರ್ – ರೆಕಿಟ್‌ ಜಿಡಿಪಿ ಮಲ್ಟಿಪ್ಲೈಯರ್‌ 2.5 ಅನ್ನ ಉಹೊಂದಿದ್ದು, ಭಾರತದಲ್ಲಿನ ಸರಾಸರಿ ರಾಸಾಯನಿಕ ಮತ್ತು ಫಾರ್ಮಾಸುಟಿಕಲ್‌ ಉತ್ಪಾದನೆ ಕಂಪನಿಯ ಬಹುತೇಕ ದುಪ್ಪಟ್ಟಾಗಿದೆ. ಅಂದರೆ, 2021 ರಲ್ಲಿ ರೆಕಿಟ್ ಉತ್ಪಾದಿಸಿದ ತಲಾ ರೂ. 1 ಮಿಲಿಯನ್‌ ಜಿಡಿಪಿಯಲ್ಲಿ, ಇನ್‌ಪುಟ್‌ಗಳು ಮತ್ತು ಕೂಲಿಯ ಮೇಲಿನ ಅದರ ವೆಚ್ಚವು ಸ್ಥಳೀಯ ಆರ್ಥಿಕತೆಯಲ್ಲಿ ರೂ. 1.5 ಮಿಲಿಯನ್‌ ಅನ್ನು ಪ್ರೋತ್ಸಾಹಿಸಿದೆ.
• ಪೂರಕ ಪೂರೈಕೆ ಸರಣಿ – ರೆಕಿಟ್‌ನ 95% ರಷ್ಟು ಸ್ಥಳೀಯ ಖರೀದಿಯು ಭಾರತದಲ್ಲಿನ ಪೂರೈಕೆದಾರರಿಂದ ನಡೆಯುತ್ತದೆ.
• ಉದ್ಯೋಗ ಸೌಲಭ್ಯ – ಭಾರತದಲ್ಲಿ ರೆಕಿಟ್‌ನ ಉದ್ಯೋಗ ಮಲ್ಟಿಪ್ಲೈಯರ್ 21 ಆಗಿದ್ದು, ರಾಷ್ಟ್ರೀಯ ಸರಾಸರಿಗೆ ಹೋಲಿಸಿದರೆ ಇದು 6 ಪಟ್ಟು ಹೆಚ್ಚಿದೆ.
“ರೆಕಿಟ್‌ನಂತಹ ದೊಡ್ಡ ಮತ್ತು ಯಶಸ್ವಿ ಜಾಗತಿಕ ಕಂಪನಿಯು ಭಾರತದ ಆರ್ಥಿಕತೆಗೆ ಕೊಡುಗೆ ನೀಡಬಹುದು, ಉದ್ಯೋಗ ಅವಕಾಶಗಳನ್ನು ಸುಧಾರಿಸಬಹುದು, ಸಾರ್ವಜನಿಕ ಆರೋಗ್ಯ ಸುಧಾರಣೆ ಮಾಡಬಹುದು ಮತ್ತು ದೇಶಾದ್ಯಂತ ಸಾಮಾಜಿಕ ಅಭಿವೃದ್ಧಿ ಸುಧಾರಣೆಯನ್ನು ಮಾಡಬಹುದು ಎಂಬುದನ್ನು ನಮ್ಮ ಸಂಶೋಧನೆಯು ಪ್ರದರ್ಶಿಸುತ್ತದೆ” ಎಂದು ಆಕ್ಸ್‌ಫರ್ಡ್‌ ಎಕಾನಮಿಕ್ಸ್‌ನ ಸಿಇಒ ಏಡ್ರಿಯನ್‌ ಕೂಪರ್‌ ಹೇಳಿದ್ದಾರೆ. “ರೆಕಿಟ್‌ ಉತ್ತಮ ಗುಣಮಟ್ಟದ ನೈರ್ಮಲ್ಯ, ಯೋಗಕ್ಷೇಮ ಮತ್ತು ಪೋಷಣೆ ಒದಗಿಸುವಿಕೆ ಸುಧಾರಣೆಯಲ್ಲೂ ಹೂಡಿಕೆ ಮಾಡಿದೆ.”
ಭಾರತದಲ್ಲಿ ವಿಶಾಲವಾದ ಸಾಮಾಜಿಕ ಅಭಿವೃದ್ಧಿಗೆ ಕೊಡುಗೆ ನೀಡಲು ರೆಕಿಟ್‌ನ ಕೊಡುಗೆಯನ್ನು ವರದಿಯು ಒತ್ತಿ ಹೇಳಿದೆ. ಸಂಶೋಧನೆ ಮತ್ತು ಅಭಿವೃದ್ಧಿ (ಆರ್‌&ಡಿ) ಉಪಕ್ರಮಗಳು, ತನ್ನ ಕಾರ್ಯಪಡೆಯನ್ನು ಸುಧಾರಿಸುವುದು ಮತ್ತು ಲಿಂಗ ತೊಡಗಿಸಿಕೊಳ್ಳುವಿಕೆ ಸುಧಾರಣೆ ಮತ್ತು ಆರೋಗ್ಯಕರ ಮತ್ತು ಹೆಚ್ಚು ನೈರ್ಮಲ್ಯಯುತ ಜೀವನವನ್ನು ಸುಧಾರಿಸಲು ಸ್ಥಳೀಯ ಸಮುದಾಯಗಳಿಗೆ ಬೆಂಬಲ ನೀಡುವುದೂ ಇದರಲ್ಲಿ ಸೇರಿವೆ.
ರೆಕಿಟ್‌ ಸಿಇಒ ಲಕ್ಷ್ಮಣ ನರಸಿಂಹನ್‌ ಮಾತನಾಡಿ “ಭಾರತದಲ್ಲಿ ನಮ್ಮ ಬಲವಾದ ಹೆಜ್ಜೆ ಗುರುತಿನ ಬಗ್ಗೆ ನಾವು ತುಂಬಾ ಹೆಮ್ಮೆ ಹೊಂದಿದ್ದೇವೆ ಮತ್ತು ಇಲ್ಲಿ ನಾವು ವಿಶ್ವದಲ್ಲೇ ಪ್ರಮುಖ ಆರ್‌&ಡಿ ಮತ್ತು ಐಟಿ ಘಟಕಗಳನ್ನು ಸ್ಥಾಪಿಸಿದ್ದೇವೆ. ನಮ್ಮ ಉದ್ಯಮಕ್ಕೆ ಭಾರತದಲ್ಲಿ ಉತ್ತಮ ಪ್ರತಿಭೆಗಳು ಇವೆ ಮತ್ತು ನಮ್ಮ ಯಶಸ್ಸಿಗೆ ಸ್ಥಳೀಯ ಪೂರೈಕೆ ಸರಣಿಯು ಪ್ರಮುಖವಾಗಿದೆ. ಸರ್ಕಾರದ ಮೇಕ್ ಇನ್ ಇಂಡಿಯಾ ಕ್ಯಾಂಪೇನ್‌ಗೆ ಅನುಗುಣವಾಗಿ, 95% ರಷ್ಟು ರೆಕಿಟ್‌ ಸ್ಥಳೀಯ ಖರೀದಿಯು ಭಾರತೀಯ ಪೂರೈಕೆದಾರ ರೊಂದಿಗೆ ನಡೆಯುತ್ತದೆ.”

ರೆಕಿಟ್‌ನ ದಕ್ಷಿಣ ಏಷ್ಯಾದ ಎಸ್‌ವಿಪಿ ಗೌರವ್ ಜೈನ್‌ ಹೇಳುವಂತೆ, 1934 ರಿಂದಲೂ ಭಾರತದ ಮನೆ ಮನೆಯಲ್ಲೂ ಇರುವ ನಾವು, ಭಾರತದ 75ನೇ ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ಈ ವರದಿಯನ್ನು ಪ್ರಕಟಿಸಲು ನಮಗೆ ಹೆಮ್ಮೆಯಾಗುತ್ತಿದೆ. ಆಕ್ಸ್‌ಫರ್ಡ್‌ನ ಸ್ವತಂತ್ರ ವಿಶ್ಲೇಷಣೆಯು ಈ ಬಲವಾದ ಪರಂಪರೆಯ ಆಧಾರದಲ್ಲಿ ಮುಂದುವರಿಯುವ ಬದ್ಧತೆಯನ್ನು ಸಾಬೀತುಪಡಿಸುತ್ತದೆ. ಭಾರತದ ಆರ್ಥಿಕ ಬೆಳವಣಿಗೆ, ಉದ್ಯೋಗ ಅವಕಾಶಗಳನ್ನು ಬೆಂಬಲಿಸುವುದು ಮತ್ತು ಹಲವು ವರ್ಷಗಳವರೆಗೂ ಸಾಮಾಜಿಕ ಸವಾಲುಗಳನ್ನು ಪರಿಹರಿಸಲು ನಾವು ಎದುರು ನೋಡುತ್ತಿದ್ದೇವೆ.”

ಸಾಮಾಜಿಕ ಸವಾಲುಗಳನ್ನು ನಿರ್ವಹಿಸಲು ಭಾರತ ಸರ್ಕಾರ, ಸರ್ಕಾರೇತರ ಸಂಸ್ಥೆಗಳು (ಎನ್‌ಜಿಒಗಳು), ಉದ್ಯಮ ಸಹಭಾಗಿತ್ವ ಗಳು ಮತ್ತು ಇತರ ಸಂಸ್ಥೆಗಳೊಂದಿಗೆ ರೆಕಿಟ್ ಪಾಲುದಾರಿಕೆ ಹೊಂದಿದೆ.

ಭಾರತದಲ್ಲಿನ ಪ್ರಮುಖ ಸಾಮಾಜಿಕ ಪರಿಣಾಮ ಕಾರ್ಯಕ್ರಮಗಳು ಇವುಗಳನ್ನು ಒಳಗೊಂಡಿವೆ:

• ಡೆಟಾಲ್ ಬನೇಗಾ ಸ್ವಸ್ಥ ಇಂಡಿಯಾ ಕ್ಯಾಂಪೇನ್‌ ಆರೋಗ್ಯ ಮತ್ತು ನೈರ್ಮಲ್ಯದ ಕುರಿತು ಜನರ ವರ್ತನೆಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದು, 2014 ರಲ್ಲಿ ಇದನ್ನು ಆರಂಭಿಸಿದಾಗಿನಿಂದ 116 ಮಿಲಿಯನ್‌ ಜನರನ್ನು ತಲುಪಿದೆ.
• ಡೆಟಾಲ್ ಸ್ಕೂಲ್‌ ಹೈಜೀನ್‌ ಎಜುಕೇಶನ್ ಪ್ರೋಗ್ರಾಮ್‌ ಕೈತೊಳೆಯುವಂತಹ ಮಕ್ಕಳ ಶುಚಿತ್ವ ವರ್ತನೆಗಳನ್ನು ಬೋಧಿಸು ತ್ತಿದ್ದು, ಐದು ಪ್ರಮುಖ ನೈರ್ಮಲ್ಯದ ಸ್ಥಳಗಳಾದ ಮನೆ, ಶಾಲೆ, ನೆರೆಹೊರೆ, ವೈಯಕ್ತಿಕ ಮತ್ತು ಅನಾರೋಗ್ಯದ ಹಂತದಲ್ಲಿ ಶುಚಿತ್ವದ ಬಗ್ಗೆ 20 ಮಿಲಿಯನ್ ಮಕ್ಕಳಿಗೆ ಜಾಗೃತಿ ಮೂಡಿಸಿದೆ.
• ರೀಚ್ ಈಚ್ ಚೈಲ್ಡ್‌ ಪ್ರೋಗ್ರಾಮ್‌ ಅಪೌಷ್ಠಿಕತೆಯಿಂದ ಮರಣ ಹಾಗೂ ಅನಾರೋಗ್ಯಕ್ಕೆ ಒಳಪಡುವ ಸಾಧ್ಯತೆಯಿಂದ 6,500 ಮಕ್ಕಳನ್ನು ರಕ್ಷಿಸಿದೆ.
• ಹಾರ್ಪಿಕ್ ವರ್ಲ್ಡ್‌ ಟಾಯ್ಲೆಟ್ ಕಾಲೇಜ್ ಪ್ರೋಗ್ರಾಮ್ ಭಾರತದ ನೈರ್ಮಲ್ಯ ಕೆಲಸಗಾರರಿಗೆ ಉತ್ತಮ ಆರ್ಥಿಕ ಅನುಕೂಲ, ಹೆಚ್ಚಿನ ಮನ್ನಣೆ ಮತ್ತು ಸುರಕ್ಷಿತ ಕೆಲಸದ ವಾತಾವರಣವನ್ನು ಒದಗಿಸುತ್ತಿದ್ದು, 15,800 ಕ್ಕೂ ಹೆಚ್ಚು ಕೆಲಸಗಾರರಿಗೆ ತರಬೇತಿ ನೀಡಿದೆ.