Sunday, 15th December 2024

ಉತ್ತರ ಪ್ರದೇಶದಲ್ಲಿ ನಿರಂತರ ಮಳೆ: 7 ಜನರ ಸಾವು, ರೆಡ್ ಅಲರ್ಟ್ ಘೋಷಣೆ

ಲಖನೌ: ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ ಎಡಬಿಡದೇ ಸುರಿದ ಭಾರೀ ಮಳೆಗೆ, 7 ಜನರು ಮೃತಪಟ್ಟಿದ್ದಾರೆ. ಮಳೆಯಿಂದಾಗಿ ಶಾಲೆಗಳು ಮುಚ್ಚಲ್ಪಟ್ಟಿವೆ. ಅನೇಕ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.

ಹಲವಾರು ಪ್ರದೇಶಗಳಲ್ಲಿ ಮರಗಳು ನೆಲಕ್ಕುರುಳಿದ ಕಾರಣ ವಿದ್ಯುತ್ ತಂತಿಗಳನ್ನು ಕತ್ತರಿಸ ಲಾಗಿದೆ. ಕೆಲವು ಪ್ರದೇಶಗಳಲ್ಲಿ, ರೈಲು ಹಳಿಗಳು ಮುಳುಗಿವೆ ಮತ್ತು ಜಲಾವೃತ ರಸ್ತೆಗಳಿಂದಾಗಿ ಅಂಡರ್ ಪಾಸ್ ಗಳನ್ನು ಮುಚ್ಚಲಾಗಿದೆ. ರಾಯ್ ಬರೇಲಿ ಮತ್ತು ಅಮೇಥಿ ಜಿಲ್ಲೆಗಳಲ್ಲಿ, ಭಾರಿ ಮಳೆಯಿಂದಾಗಿ ಅಧಿಕಾರಿಗಳು ಮುಂದಿನ ಎರಡು ದಿನಗಳ ವರೆಗೆ ಎಲ್ಲಾ ಶಾಲೆಗಳನ್ನು ಎಂಟನೇ ತರಗತಿಯವರೆಗೆ ಮುಚ್ಚಿದ್ದಾರೆ.

ಜಾನ್ ಪುರದ ಸುಜನ್ ಪುರ ಪ್ರದೇಶದಲ್ಲಿ, ನಿರಂತರ ಮಳೆಯ ನಂತರ ಗೋಡೆ ಕುಸಿತದಿಂದ ಮೂವರು ಮೃತಪಟ್ಟಿದ್ದಾರೆ. ಬಾರಾಬಂಕಿಯ ರಾಮ್ ಸನೇಹಿ ಘಾಟ್ ಪ್ರದೇಶದಲ್ಲಿ ಇಬ್ಬರು ಮೃತಪಟ್ಟರು. ಕೌಶಾಂಬಿ, ಅಯೋಧ್ಯೆ ಮತ್ತು ಸಿತಾಪುರದಲ್ಲಿಯೂ ಸಾವುಗಳು ವರದಿಯಾಗಿವೆ.